ಸೋಲಿನಿಂದ ಜೀವನದಲ್ಲಿ ಸಾಧನೆ : ಮೋಹನ್ ಕುಮಾರ್ ಹೇಳಿಕೆ

30
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮನುಷ್ಯನು ಜೀವನದಲ್ಲಿ ಕಷ್ಟ ಅನುಭವಿಸಿದರೆ ಮಾತ್ರ ಮುಂದೆ ಸುಖ ಕಾಣಬಹುದು. ಕಷ್ಟ ಅನುಭವಿಸದೆ ಸುಖ ಕಾಣಲು ಸಾಧ್ಯವಿಲ್ಲ. ಹಸಿವು, ಬಡತನ, ಉದ್ಯೋಗ, ಅವಮಾನ, ಸೋಲು ಇವುಗಳಿಂದ ಜೀವನದಲ್ಲಿ ಯಾವ ಸಾಧನೆ ಬೇಕಾದರೂ ಮಾಡಬಹುದು ಎಂದು ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲೀಕ ಮೋಹನ್ ಕುಮಾರ್ ಹೇಳಿದರು.

ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜು ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಸಂಯೋಜಕಿ ಮೇರಿ ಸ್ಮಿತಾ ಹಳೇ ವಿದ್ಯಾರ್ಥಿ ಸಂಘದ ಬಗ್ಗೆ ಮಾತನಾಡಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಣಯರಾಜ್ ಜೈನ್, ಹಳೇ ವಿದ್ಯಾರ್ಥಿ ಸಂಘದ ಮುಂದಿನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಉನ್ನತ ಸಾಧನೆಗೈದ ಕಾಲೇಜು ಹಳೇ ವಿದ್ಯಾರ್ಥಿಗಳನ್ನು ಕಾಲೇಜು ಉಪನ್ಯಾಸಕಿ ರೇನಿಟಾ ಫರ್ನಾಂಡಿಸ್ ಪರಿಚಯಿಸಿದರು.

ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ವ್ಯವಸ್ಥಾಪಕ ಚಂದ್ರನಾಥ ಜೈನ್ ಉಪಸ್ಥಿತರಿದ್ದರು. ನಿಖಿತ್ ಜೈನ್ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘ ಕಾರ್ಯದರ್ಶಿ ನಿಶ್ಮಿತಾ ವಂದಿಸಿದರು. ಹಳೇ ವಿದ್ಯಾರ್ಥಿ ಸಾಯಿ ಕಿರಣ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net