

ಹೆಬ್ರಿ: ಮುದ್ರಾಡಿ ಸಮೀಪ ಉಪ್ಪಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕರ ನಿಧಿಯಿಂದ ನಿರ್ಮಾಣಗೊಂಡ ವಿವೇಕ ತರಗತಿ ಕೊಠಡಿ, ಹಳೇ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯದಿಂದ ಶಾಲೆಗೆ ಡೆಸ್ಕ್ ಪಿಠೋಪಕರಣ ಹಸ್ತಾಂತರ, ಎಂ.ಆರ್.ಪಿ.ಎಲ್ ಮಂಗಳೂರು, ಎ.ಎನ್.ಎಫ್ ಹೆಬ್ರಿ ತಂಡದಿಂದ ನೀಡಿದ ಮೇಜು, ಕುರ್ಚಿ ಆಸನ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿಗೆ ತಗಡು ಚಪ್ಪರ, ಶಾಲೆಗೆ ಟೈಲ್ಸ್, ರಸ್ತೆ ಉದ್ಘಾಟನೆ ನೆರವೇರಿತು.
ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ ಸಭಾ ಕಾರ್ಯಕ್ರಮ, ನಿವೃತ್ತ ಅಧ್ಯಾಪಕ ರಘುಪತಿ ಕಲ್ಕೂರ ಹಳೇ ವಿದ್ಯಾರ್ಥಿ ಸಂಘ ಉದ್ಘಾಟಿಸಿದರು. ಮುದ್ರಾಡಿ ಗ್ರಾಪಂ ಉಪಾಧ್ಯಕ್ಷೆ ರಮ್ಯಾಕಾಂತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ವಲಯ ಯೋಜನಾಧಿಕಾರಿ ಲೀಲಾವತಿ, ಪಿಡಿಒ ಅಮೃತ ಕುಲಾಲ್, ನಿವೃತ್ತ ಯೋಧ ಶ್ರೀನಿವಾಸ ಭಟ್, ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಪೂಜಾರಿ, ದತ್ತಿ ನಿಧಿ ನೀಡಿದ ರಾಘವೇಂದ್ರ ಕಲ್ಕೂರ್, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಲಕ್ಷ್ಮೀನಾರಾಯಣ ನಾಯಕ್, ಮುದ್ರಾಡಿ ಗ್ರಾಪಂ ಸದಸ್ಯರಾದ ಗಣಪತಿ ಎಂ., ಜಗದೀಶ್ ಪೂಜಾರಿ, ನಾಗಶ್ರೀ, ರತ್ನ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶ್ರೀನಿವಾಸ್ ಭಟ್ ಸ್ವಾಗತಿಸಿದರು. ಶಿಕ್ಷಕಿ ವೇದಾವತಿ ನಿರೂಪಿಸಿದರು. ರಾಘವೇಂದ್ರ ನಾಯ್ಕ ವಂದಿಸಿದರು.
ದಿ.ಮರಿಯಪ್ಪ ಕಲ್ಕೂರು ಜನ್ಮದಿನ ಶತಮಾನೋತ್ಸವ ಅಂಗವಾಗಿ ಏಳನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಸಮರ್ಪಿಸಲಾಯಿತು. ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ವೆಂಕಟರಮಣ ಕಲ್ಕೂರ, ಅಡುಗೆ ಸಹಾಯಕರನ್ನು ಗೌರವಿಸಲಾಯಿತು.