ಹಳೇ ದಾಖಲೆಗಳನ್ನೂ ಹಿಂದಿಕ್ಕಬೇಕು

10 smg 1a
ಶಿವಮೊಗ್ಗದಲ್ಲಿ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯನ್ನು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಬಿ.ವೈ.ವಿಜೇಯೇಂದ್ರ, ಭಾರತಿ ಶೆಟ್ಟಿ, ಟಿ.ಡಿ.ಮೇಘರಾಜ್ ಇದ್ದರು.
Published on

ಶಿವಮೊಗ್ಗ: ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಈ ಬಾರಿ ಹಿಂದಿನ ದಾಖಲೆಗಳನ್ನೂ ಪುಡಿಗಟ್ಟುವ ಮೂಲಕ ಭರ್ಜರಿ ಗೆಲುವು ಸಾಧಿಸಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಸಂಬಂಧ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಸಂಘಟನೆಯ ಧ್ವನಿ ಮತ್ತು ಸಿದ್ಧಾಂತ ಶಿಕ್ಷಕರ ಪರವಾಗಿದೆ. ವಿದ್ಯಾವಂತರನ್ನು ಸುಲಭವಾಗಿ ಒಲಿಸಿಕೊಳ್ಳುವುದಕ್ಕೆ ಆಗುವುದಿಲ್ಲ, ಆರು ಜಿಲ್ಲೆಗಳ ವ್ಯಾಪ್ತಿಗೆ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಬರಲಿದ್ದು ಸಾಕಷ್ಟು ಶ್ರಮವನ್ನು ಈಗಿನಿಂದಲೇ ಹಾಕಬೇಕಿದೆ ಎಂದರು. ಡಿ.ಎಚ್.ಶಂಕರಮೂರ್ತಿ ಅವರು ಪದವೀಧರ ಕ್ಷೇತ್ರವನ್ನು 30 ವರ್ಷ ಪ್ರತಿನಿಧಿಸಿದ್ದರು. ಹಿಂದಿನ ದಾಖಲೆಗಳನ್ನು ಹಿಂದಿಕ್ಕಿ ಭರ್ಜರಿ ಗೆಲುವು ಸಾಧಿಸಬೇಕಿದೆ ಎಂದರು. ಮೇ ತಿಂಗಳಲ್ಲಿ ಲೋಕಸಭೆ, ತದನಂತರ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಿಗದಿ ಆಗುವ ಸಾಧ್ಯತೆ ಇದೆ. ಆನ್‌ಲೈನ್ ನೋಂದಣಿಗೆ ಅವಕಾಶ ನೀಡಿದೆ. ಜತೆಗೆ ಆಫ್‌ಲೈನ್ ನೋಂದಣಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಮುಂಬರುವ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನೋಂದಣಿ ಪ್ರಕ್ರಿಯೆ ಶುರುವಾಗಬೇಕು. ಪದವಿ ಮುಗಿಸಿ ಮೂರು ವರ್ಷ ಆದವರನ್ನು ಗುರುತಿಸಿ ನೋಂದಣಿ ಮಾಡಿಸಬೇಕು. ಆ ಜಬಾವ್ದಾರಿಯನ್ನು ಒಬ್ಬರಿಗೆ ನೀಡಬೇಕು. ನೋಂದಣಿ ಪ್ರಕ್ರಿಯೆ ಎಂಬುದು ಜಾತ್ರೆಗಳಲ್ಲಿ ತೇರು ಎಳೆದಂತೆ ಆಗಬೇಕಿದೆ ಎಂದು ಸಿ.ಟಿ.ರವಿ ಹೇಳಿದರು. ಸರ್ಕಾರದ ಒಳಗೆಯೇ ಭೂಕಂಪನದ ಕೇಂದ್ರಗಳಿವೆ ಅನ್ನುವ ಮುನ್ಸೂಚನೆಯನ್ನು ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ತೋರಿಸಿಕೊಟ್ಟಿದ್ದಾರೆ. ಐದು ವರ್ಷ ಒಳ್ಳೆಯ ಆಡಳಿತ ನೀಡುವ ಜವಾಬ್ದಾರಿ ಅವರಿಗೆ ಇದೆ. ಆದರೆ ವಿದ್ಯುತ್, ಮುದ್ರಾಂಕ, ಬಸ್ ದರ, ಅಬಕಾರಿ ಸುಂಕ ಏರಿಕೆ ಮಾಡುವ ಮೂಲಕ ಜನರನ್ನು ಶೋಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net