

ಕುಂಬಳೆ: ಭಾರತೀಯ ಕೆಥೋಲಿಕ್ ಯುವ ಸಂಚಲನ ಪೆರ್ಮುದೆ ಘಟಕದ ಆಶ್ರಯದಲ್ಲಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವೃದ್ಧರ ದಿನ ಆಚರಿಸಲಾಯಿತು.
ಧರ್ಮಗುರು ಹೆರಾಲ್ಡ್ ಡಿಸೋಜ ಮಾತನಾಡಿ, ವಯಸ್ಕರನ್ನು ಗೌರವಿಸುವುದು ಕರ್ತವ್ಯ. ಅವರ ನಡೆನುಡಿಗಳು ನಮಗೆ ಜೀವನದ ಪಾಠ. ಅವರ ಆಶೀರ್ವಾದ ಸದಾ ನಮ್ಮೊಂದಿಗಿರುತ್ತದೆ ಎಂದರು.
ಪೈವಳಿಕೆ ಪಂಚಾಯಿತಿ ಮಾಜಿ ಸದಸ್ಯೆ ಥೆರೆಸಾ ಡಿಸೋಜ ಅನುಭವ ಹಂಚಿಕೊಂಡರು. ಗಾಯನ ನಡೆಯಿತು.
ಸಹಾಯಕ ಧರ್ಮಗುರು ಕ್ಲೋಡ್ ಕೋರ್ಡಾ, ಇಗರ್ಜಿಯ ಪಾಲನಾ ಸಮಿತಿ ಉಪಾಧ್ಯಕ್ಷೆ ಡೋರಿನ್ ಪಿರೆರಾ, ಕಾರ್ಯದರ್ಶಿ ಲ್ಯಾನ್ಸಿ ಡಿಸೋಜ ಉಪಸ್ಥಿತರಿದ್ದರು. ಐಸಿವೈಎಂ ಘಟಕ ಕಾರ್ಯದರ್ಶಿ ಮೋನಿಕಾ ಡಿ ಅಲ್ಮೇಡಾ ಮಾಣಿ ಕಾರ್ಯಕ್ರಮ ನಿರೂಪಿಸಿದರು.