ಹಳೇ ಪಿಂಚಣಿಗೆ ಆಗ್ರಹಿಸಿ ಸೆ. ೨೨ಕ್ಕೆ ‘ಭಾರತ್ ಯಾತ್ರೆ’ ಗದುಗಿಗೆ

Bharat Yatra-3
Published on


ಗದಗ: ಹೊಸಪಿಂಚಣಿ ಯೋಜನೆಯು ಸಮಸ್ತ ಸರಕಾರಿ ನೌಕರರಿಗೆ ಮಾರಕವಾಗಿದ್ದು ಇದನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ಭಾರತ ಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವ್ಹಿ.ಎಂ.ಹಿರೇಮಠ ಹೇಳಿದರು.
ಅವರು ಶನಿವಾರ ಗದುಗಿನ ಸರಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಯಶಸ್ವಿಗೊಳಿಸಿದ್ದಕ್ಕಾಗಿ ಎರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ‘ಭಾರತ್ ಯಾತ್ರೆ’ ಯನ್ನು ಯಶಸ್ವಿಗೊಳಿಸಲು ನಡೆದ ಸಂಘದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಹೊಸ ಪಿಂಚಣಿಯನ್ನು ರದ್ದುಗೊಳಿಸಿ ಹಳೇ ಪಿಂಚಣಿಯನ್ನೇ ಜಾರಿಗೊಳಿಸುವಂತೆ ಒತ್ತಾಯಿಸಲು ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿಯಿಂದ ಹಮ್ಮಿಕೊಂಡಿರುವ ‘ಭಾರತ್ ಯಾತ್ರೆ’ ಯನ್ನು ಯಶಸ್ವಿಗೊಳಿಸಲು ನಾವೆಲ್ಲರೂ ಪಾಲ್ಗೋಳ್ಳೋಣ ಎಂದರು.
ಒಂದು ತಿಂಗಳ ಕಾಲ ವಿವಿದ ರಾಜ್ಯಗಳ ಮೂಲಕ ಸಂಚರಿಸಿ ದೆಹಲಿಯನ್ನು ತಲುಪುವ ಈ ಯಾತ್ರೆಯು ಹೊಸ ಪಿಂಚಣಿಯಿoದಾಗುವ ತೊಂದರೆಗಳು ಹಾಗೂ ಹಳೇ ಪಿಂಚಣಿ ಪದ್ದತಿಗಳ ಅನುಕೂಲತೆಗಳ ಕುರಿತು ಮಾಹಿತಿ ನೀಡಲಿದೆ. ಈ ಯಾತ್ರೆಯಲ್ಲಿ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ನವದೆಹಲಿಯ ಅಧ್ಯಕ್ಷ ರಾಮಪಾಲ್‌ಸಿಂಗ್ ಹಾಗೂ ಮಹಾಕಾರ್ಯದರ್ಶಿ ಕಮಲಾಕಾಂತ್ ತ್ರಿಪಾಠಿ, ಕಾರ್ಯಾಧ್ಯಕ್ಷರಾದ ಬಸವರಾಜ ಗುರಿಕಾರ ಹಾಗೂ ಕೋಶಾಧ್ಯಕ್ಷರಾದ ಹರಗೋವಿಂದನ್ ಅವರ ನೇತ್ರತ್ವದಲ್ಲಿ ನಡೆಯುವ ಈ ಯಾತ್ರೆಯು ಕರ್ನಾಟಕದ ಬೀದರ್ ಜಿಲ್ಲೆಗೆ ಸೆ. ೧೭ ರಂದು ಆಗಮಿಸಿ ಸೆ. ೨೩ರವೆಗೆ ರಾಜ್ಯದ ವಿವಿದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಸಂಚರಿಸಲಿದೆ.
ಗದಗ ಜಿಲ್ಲೆಯ ಸರಕಾರಿ ನೌಕರರ ಭವನಕ್ಕೆ ಸೆ. ೨೨ ರಂದು ಮುಂಜಾನೆ ೧೦-೩೦ ಗಂಟೆಗೆ ಈ ಯಾತ್ರೆ ಆಗಮಿಸಲಿದ್ದು ಸಾವಿರಾರು ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು. ಇದು ಅತ್ಯಂತ ಮಹತ್ವದ ಹೋರಾಟವಾಗಿದ್ದು ಎಲ್ಲ ಶಿಕ್ಷಕರು ಸರಕಾರಿ ನೌಕರರು ಈ ಯಾತ್ರೆಯಲ್ಲಿ ಪಾಲ್ಗೋಳ್ಳುವ ಮೂಲಕ ಇದನ್ನು ಯಶಸ್ವಿಗೊಳಿಸಬೇಕೆಂದರು.
ಎನ್.ಪಿ.ಎಸ್ ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ಸಿ.ನಾಗರಳ್ಳಿ, ಮಂಜುನಾಥ ಹುಯಿಲಗೋಳ, ಪಿ.ಸಿ.ಪೂಜಾರ ಅವರನ್ನು ಸನ್ಮಾನಿಸಿ ಭಾರತ್ ಯಾತ್ರೆಯನ್ನು ಯಶಸ್ವಿಗೊಳಿಸಲು ಕೋರಲಾಯಿತು. ನಾಗರಾಜ ಪಾಟೀಲ, ಪಿ.ಬಿ.ಮುಧೋಳಮಠ, ಗಂಗಾಧರ ಗೌಡರ, ಭೋಜರಾಜ ಹಡಪದ, ಪಿ.ವೀರಪ್ಪ ಮುಂತಾದವರು ಸಲಹೆ ಸೂಚನೆ ನೀಡಿದರು.
ಗದಗ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ ಕುರಿಯವರ, ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಬಿ.ಕೊಣ್ಣೂರ, ಖಜಾಂಚಿ ಎ.ಕೆ.ಒಂಟಿ, ಉಪಾಧ್ಯಕ್ಷ ಎಂ.ವೈ.ಚಕ್ರಸಾನಿ, ಸಹಕಾರ್ಯದರ್ಶಿಗಳಾದ ಮೋಹನ ಮೆಣಸಿನಕಾಯಿ, ಮಹಾಲಕ್ಷಿö್ಮÃ ತೊಂಡಿಹಾಳ, ಸಂಘಟನಾ ಕಾರ್ಯದರ್ಶಿ ಬಸಮ್ಮ ಹರ್ತಿ, ಗದಗ ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಶಿವಯೋಗಿ ಬಂಡಿ, ಶಹರ ಘಟಕದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ, ರೋಣ ಘಟಕದ ಅಧ್ಯಕ್ಷ ವೈ.ಡಿ.ಗಾಣಿಗೇರ, ಗಜೇಂದ್ರಗಡ ಘಟಕದ ಅಧ್ಯಕ್ಷ ವ್ಹಿ.ಎ.ಹಾದಿಮನಿ, ಶಿರಹಟ್ಟಿ ಘಟಕದ ಅಧ್ಯಕ್ಷ ಎಸ್.ವ್ಹಿ.ಮಠದ ಹಾಗೂ ಎಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳು ‘ಭಾರತ್ ಯಾತ್ರೆ’ಯನ್ನು ಯಶಸ್ವಿಗೊಳಿಸುವದಾಗಿ ಹೇಳಿದರು. https://www.haryanaupdate.com/govt-scheme/old-pension-scheme-news-latest-update-on-old-pension-scheme/cid12155295.htm

ಹಳೇ ಪಿಂಚಣಿಗೆ ಆಗ್ರಹಿಸಿ ಸೆ. ೨೨ಕ್ಕೆ ‘ಭಾರತ್ ಯಾತ್ರೆ’ ಗದುಗಿಗೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net