ಅನುದಾನಿತ ಸಂಸ್ಥೆ ನೌಕರರಿಗೂ ಸೌಲಭ್ಯ ನೀಡಿ,  ಜಾಗೃತಿ ಸಭೆಯಲ್ಲಿ ಹನುಮಂತಪ್ಪ ಆಗ್ರಹ

IMG_20251010_204327_40.jpg
Published on

ಹುಬ್ಬಳ್ಳಿ: ನೂತನ ಪಿಂಚಣಿ ಯೋಜನೆಯಿಂದಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಪಿಂಚಣಿ ಯೋಜನೆ ಕಡಿತಗೊಳಿಸಿ ಸರ್ಕಾರ ತಾರತಮ್ಮ ನೀತಿ ಅನುಸರಿಸುತ್ತಿದೆ. ಈ ನೀತಿಯನ್ನು ಬಲವಾಗಿ ಪ್ರತಿಭಟಿಸುವ ಮೂಲಕ ಹಕ್ಕು ಪಡೆಯಲು ರಾಜ್ಯಾದ್ಯಂತ ನೌಕರರು ಒಗ್ಗಟ್ಟಿನೊಂದಿಗೆ ಹೋರಾಡಬೇಕಿದೆ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಹೇಳಿದರು.

ಇಲ್ಲಿಯ ವಿದ್ಯಾನಗರ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿಪೂರ್ವ ಕಾಲೇಜು ಅವರಣದಲ್ಲಿ ಕರ್ನಾಟಕ ರಾಜ್ಯ ಪಿಂಚಣಿ ವಂಚಿತ ಹಾಗೂ ಅಖಿಲ ಕರ್ನಾಟಕ ಅನುದಾನಿತ ಶಾಲೆ ಕಾಲೇಜುಗಳ ನೌಕರರ ಸಂಘದಿಂದ ಏರ್ಪಡಿಸಿದ್ದ ಧಾರವಾಡ ಜಿಲ್ಲಾ ಮಟ್ಟದ ಅನುದಾನಿತ ನೌಕರರ ಹಕ್ಕುಗಳ ಹೋರಾಟ ಜಾಗೃತಿ ಹಾಗೂ ಸಂ ಬಲವರ್ದನೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರಿಗೆ ನೀಡುತ್ತಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಅನುದಾನಿತ ಶಾಲೆ ಕಾಲೇಜುಗಳ ನೌಕರರಿಗೂ ರಾಜ್ಯ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಅನೇಕ ನೌಕರರು ನಿವೃತಿ ನಂತರ ಯಾವುದೇ ಸೌಲಭ್ಯಗಳು ಸಿಗದೇ ಕೂಲಿ ಮಾಡಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅನುದಾನಿತ ನೌಕರರ ಬೇಡಿಕೆಯನ್ನು ಈಡೇರಿಸಿ ಅವರಿಗೂ ಉತ್ತಮ ಬದುಕಿನ ಭರವಸೆ ನೀಡಬೇಕು ಎಂದರು.

ಸಭೆಯಲ್ಲಿ ಡಾ. ತ್ಯಾಗರಾಜ, ಸಂಚಾಲಕರಾದ ಮಂಜುನಾಥ ಬತ್ತದ, ಉದಯ ನಾಯಕ, ಬಸವರಾಜ ದಳವಾಯಿ, ಪಿ.ಬಿ. ಸುಣಗಾರ, ನಜೀರಅಹ್ಮದ ಕೋಲಕಾರ, ವಿಠಲ್ ವಾಮೊಡೆ, ಸಂಗಮೇಶ ಹಡಪದ, ಸುರೇಶ ಸಜ್ಜನ, ಎಸ್.ಜಿ. ಸಂಗೋಳಿ, ಮುಂತಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net