ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ

manavi
ಸಿರವಾರ ತಾಲೂಕಿನ ಬಲ್ಲಟಗಿಯಲ್ಲಿ ಶಾಸಕ ಜಿ.ಹಂಪಯ್ಯ ನಾಯಕಗೆ ತಾಲೂಕು ಸರ್ಕಾರಿ ನೌಕರರ ಸಂಘ ಶುಕ್ರವಾರ ಮನವಿ ಸಲ್ಲಿಸಿತು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡ ಏರಡ್ಡಿ, ತಹಸೀಲ್ದಾರ್ ರವಿ ಎಸ್ ಅಂಗಡಿ, ಶಿಶು ಅಭಿವೃದ್ಧಿ ಅಧಿಕಾರಿ ನಾಗರತ್ನ ಇದ್ದರು.
Published on

ಸಿರವಾರ: ತಾಲೂಕಿನ ಬಲ್ಲಟಗಿಯಲ್ಲಿ ಏಳನೇ ವೇತನ ಆಯೋಗ ಶಿಫಾರಸು ಮಾಡುವ ಬಗ್ಗೆ ಸದನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿ ತಾಲೂಕು ಸರ್ಕಾರಿ ನೌಕರರ ಸಂಘ ಶಾಸಕ ಜಿ.ಹಂಪಯ್ಯ ನಾಯಕಗೆ ಶುಕ್ರವಾರ ಮನವಿ ಸಲ್ಲಿಸಿತು.


ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ, ಸರ್ಕಾರದ ಮುಂದಿರುವ ನೌಕರರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಸಿಪಿಐ ಶಶಿಕಾಂತ್ ಎಂ, ಪಿಎಸ್‌ಐ ಗುರುಚಂದ್ರ ಯಾದವ್, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ, ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ, ನೀರಾವರಿ ಇಲಾಖೆಯ ಎಇಇ ವಿಜಯಲಕ್ಷ್ಮೀ ಪಾಟೀಲ್, ಉಪ ಖಜಾನೆ ಅಧಿಕಾರಿ ಜಂಬುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net