ಹಳೇ ಪಿಂಚಣಿ ಸೌಲಭ್ಯವೇ ಬೇಕು

nrp manavi
ಎನ್.ಆರ್.ಪುರ ತಾಲೂಕು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದಿಂದ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಕೆ.ಎಂ.ಕೃಷ್ಣಮೂರ್ತಿ, ಸುಭಾಷ್, ಬಿ.ನಂಜುಂಡಪ್ಪ, ಗೌಸ್‌ಮೊಹಿಯುದ್ದೀನ್, ಎಚ್.ಮಂಜುನಾಥ್, ಕೃಷ್ಣಪ್ಪ ಇತರರಿದ್ದರು.
Published on

ಎನ್.ಆರ್.ಪುರ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದ ಏಕೀಕೃತ ಪಿಂಚಣಿ ಯೋಜನೆಯೂ ಸರ್ಕಾರಿ ನೌಕರರ ವಿರುದ್ಧವಾಗಿದೆ. ಆದ್ದರಿಂದ ಒಪಿಎಸ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಗುರುವಾರ ತಾಲೂಕು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದಿಂದ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲೂಕು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಕೆ.ಎಂ.ಕೃಷ್ಣ್ಣಮೂರ್ತಿ ಮಾತನಾಡಿ, 2006ರ ನಂತರ ಸರ್ಕಾರಿ ನೌಕರಿಗೆ ಸೇರಿದವರಿಗೆ ಹೊಸ ಪಿಂಚಣಿ ಯೋಜನೆ ಅನ್ವಯವಾಗುತ್ತದೆ. ಹೊಸ ಪಿಂಚಣಿ ಯೋಜನೆ ಬೇಡ, ಹಳೇ ಪಿಂಚಣಿ ಯೋಜನೆ ಜಾರಿಗೆ ತನ್ನಿ ಎಂದು 10 ವರ್ಷದಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಈಗ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ತಂದಿದೆ. ಏಕೀಕೃತ ಪಿಂಚಣಿ ಯೋಜನೆಯಲ್ಲಿಯೂ ಷೇರು ಮಾರುಕಟ್ಟೆಯ ಪಾಲುದಾರಿಕೆ ಇರುತ್ತದೆ. ಅದರಲ್ಲಿರುವ ಕೆಲವು ಅಂಶಗಳು ಸರ್ಕಾರಿ ನೌಕರರ ಜೀವನಕ್ಕೆ ಭದ್ರತೆ ಕೊಡುವಲ್ಲಿ ವಿಫಲವಾಗಿವೆ. ಆದ್ದರಿಂದ ಒಪಿಎಸ್‌ಗಾಗಿ ಒತ್ತಾಯಿಸುತ್ತಿದ್ದೇವೆ ಎಂದರು.
ತಾಲೂಕು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಕಾರ್ಯದರ್ಶಿ ಸುಬಾಷ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ಗೌಸ್ ಮಹಿಯದ್ದೀನ್, ಎಚ್.ಮಂಜುನಾಥ್, ಕೃಷ್ಣಪ್ಪ, ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net