

ಬೀರೂರು: ಹೋಬಳಿಯಾದ್ಯಂತ ಸೋಮವಾರ ಸಂಜೆಯಿಂದ ರಾತ್ರಿವರೆಗೆ ಧಾರಾಕಾರ ಮಳೆಗೆ ಚಿಕ್ಕಂಗಳ ಗ್ರಾಮದಲ್ಲಿ ಮನೆಗೋಡೆ ಕುಸಿದು ವೃದ್ಧ ಮೃತಪಟ್ಟಿದ್ದಾರೆ.
ಗೋಪಾಲ ಗೌಡ (66) ಮೃತ ದುರ್ದೈವಿ. ಮೃತರಿಗೆ ಇಬ್ಬರು ಪುತ್ರಿಯರು ಇದ್ದು, ಇಬ್ಬರನ್ನೂ ಮದುವೆ ಮಾಡಿಕೊಟ್ಟಿದ್ದಾರೆ. ಮನೆಯಲ್ಲಿ ಒಬ್ಬರೇ ವಾಸವಿದ್ದರು. ಸೋಮವಾರ ರಾತ್ರಿವರೆಗೂ ಭಾರಿ ಮಳೆಯಾಗಿದ್ದರಿಂದ ಮನೆಗೋಡೆ ಕುಸಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಸಾರ್ವಜನರಿಗೆ ತಿಳಿದಬಂದಿದ್ದು, ಗ್ರಾಮ ಲೆಕ್ಕಾಧಿಕಾರಿ ನವೀನ್ ಸ್ಥಳ ಪರಿಶೀಲಿಸಿದರು.