ದನದ ಕೊಟ್ಟಿಯ ಅಟ್ಟದ ಮೇಲಿಂದ ಬಿದ್ದು ವೃದ್ಧ ಸಾವು

Crime Logo
Published on

ಹಾನಗಲ್ಲ: ಕೃಷಿ ಸಲಕರಣೆಗಳನ್ನು ತೆಗೆದುಕೊಳ್ಳಲು ಮನೆಯ ಅಟ್ಟದ ಮೇಲೆ ಹತ್ತಿದ ವೃದ್ಧರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೋಣನಕೊಪ್ಪ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಶೇಖಪ್ಪ ಪುಟ್ಟಪ್ಪ ಅರಿಷಿಣಗುಪ್ಪಿ (60) ಮೃತ ವೃದ್ಧರು.
ಇವರು ಕೃಷಿ ಸಲಕರಣೆಗಳನ್ನು ತೆಗೆದುಕೊಳ್ಳುವ ಸಲುವಾಗಿ ದನದ ಕೊಟ್ಟಿಯ ಅಟ್ಟದ ಮೇಲೆ ಹತ್ತಿದ ಸಮಯದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net