ವೃದ್ಧೆ ಕತ್ತು ಕೊಯ್ದು ಕೊಲೆ, ವಾರೆಗಿತ್ತಿ ಸೇರಿ ಇಬ್ಬರ ಸೆರೆ

murder (1)
Published on

ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದ್ದ ವೃದ್ಧೆಯ ಸಾವು ಟ್ವಿಸ್ಟ್ ಪಡೆದಿದ್ದು ವೃದ್ಧೆಯ ಸಾವು ಸಹಜವಲ್ಲ, ಕೊಲೆ ಎಂಬುದು ದೃಢಪಟ್ಟಿದೆ. ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ವಾರೆಗಿತ್ತಿ(ಮೈದುನನ ಪತ್ನಿ) ಸೇರಿ ಇಬ್ಬರನ್ನು ಕುಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುತ್ತುಕೋಟೆಯ ಜ್ಯೋತಿಬಾಯಿ ಮತ್ತು ಹನುಮಂತ ಬಂಧಿತರು. ರತ್ನಾಬಾಯಿ (65) ಅವರನ್ನು ಮಾ.15ರಂದು ಸುತ್ತುಕೋಟೆಯ ಶಾಲೆಯ ಮಗ್ಗಲಿನಲ್ಲಿರುವ ಮನೆಯ ಆವರಣದಲ್ಲಿ ಮಲಗಿದ್ದಳು. ಆದರೆ ಮರು ದಿನ ಬೆಳಗ್ಗೆ ಆರೋಪಿ ಹನುಮಂತ ಅವರ ಮನೆ ಬಳಿ ಮೃತದೇಹ ಪತ್ತೆಯಾಗಿತ್ತು. ಕತ್ತು ಕೊಯ್ದು ಕುರುಹುಗಳಿದ್ದ ಕಾರಣ ಪೊಲೀಸರು ಕೊಲೆ ಶಂಕೆ ಪ್ರಕರಣ ದಾಖಲಿಸಿಕೊಂಡಿದ್ದರು.

ಅದೇ ದಿನ ಜ್ಯೋತಿಬಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಹನುಮಂತನ ಜತೆಗಿದ್ದ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಳು. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರ ಅನೈತಿಕ ಸಂಬಂಧವನ್ನು ವಿರೋಧಿಸಿದ್ದಳು. ಬುದ್ದಿವಾದ ಹೇಳಿ ಬೈದಿದ್ದಳು. ಅನೈತಿಕ ಸಂಬಂಧದ ವಿಚಾರ ಬಹಿರಂಗವಾಗುವ ಭಯದಿಂದ ರತ್ನಾಬಾಯಿಯನ್ನೇ ಕೊಲೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net