ನ.3 ರಿಂದ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಹಳಗನ್ನಡ ಕಾವ್ಯ ರಸಗ್ರಹಣ ತರಗತಿ

Published on

ಬೆಂಗಳೂರು : ಬಿಎಂಶ್ರೀ ಪ್ರತಿಷ್ಠಾನದ ವತಿಯಿಂದ ಮುಂಬರುವ ನ.3 ರಿಂದ ಹಳಗನ್ನಡ ಕಾವ್ಯ ರಸಗ್ರಹಣ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಆಸಕ್ತರು ಇ-ಮೇಲ್ ಅಥವಾ ದೂರವಾಣಿ ಮೂಲಕ ಅಕ್ಟೋಬರ್ ಅಂತ್ಯದೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ತರಗತಿಗಳು ಏಳು ತಿಂಗಳುಗಳ ಕಾಲ ನಡೆಯಲಿದ್ದು ಹಿರಿಯ ಕನ್ನಡ ವಿದ್ವಾಂಸರುಗಳಾದ ಡಾ.ಆರ್. ಲಕ್ಷ್ಮೀನಾರಾಯಣ. ಡಾ.ಕೆ.ಆರ್.ಗಣೇಶ, ಡಾ. ರಾಜಪ್ಪ ದಳವಾಯಿ, ಡಾ. ಸುರೇಶ ಪಾಟೀಲ, ಡಾ.ಎನ್.ಆರ್. ಲಲಿತಾಂಬ, ಡಾ. ಶ್ಯಾಮಲಾ ಪ್ರಕಾಶ್, ಪ್ರೊ.ಚಂದ್ರಶೇಖರ ನಾದೂರು, ಡಾ. ಬೈರಮಂಗಲ ರಾಮೇಗೌಡ, ಡಾ.ಶಾಂತರಾಜು ಅವರು ಹಳಗನ್ನಡ ಕಾವ್ಯವನ್ನು ಬೋಧನೆ ಮಾಡಲಿದ್ದಾರೆ.

ತರಗತಿಗಳು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಜೆ : 5.30 ರಿಂದ 7ರವರೆಗೆ ನಡೆಯಲಿದ್ದು, ಆನ್‌ಲೈನ್ ಮತ್ತು ಆ್ಲೈನ್ ಎರಡರಲ್ಲೂ ಪಾಠ ಲಭ್ಯ ಇರಲಿದೆ. ಹೆಚ್ಚಿನ ಮಾಹಿತಿಗೆ ಇಮೇಲ್ : bmsritrust@gmail.comವಿಳಾಸಕ್ಕೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net