ಹಳೆಗನ್ನಡ ಸಾಹಿತ್ಯಕ್ಕಿದೆ ಭವ್ಯ ಪರಂಪರೆ

3 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ಸಾಹಿತ್ಯದಲ್ಲಿ ಪೂರ್ವಕ ಹಳೆಗನ್ನಡ, ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಟ್ಟಗಳನ್ನು ಗುರುತಿಸಲಾಗಿದೆ. ಹಳೆಗನ್ನಡ ಸಾಹಿತ್ಯಕ್ಕೆ ಅದರದೇ ಆದ ಭವ್ಯ ಪರಂಪರೆ ಇದೆ. ಇಂತಹ ಪರಂಪರೆ ಬಿಡುತ್ತಾ ನಡೆದಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಾಹಿತಿ ಡಾ. ವೀರಣ್ಣ ರಾಜೂರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಸಂವು ಪ್ರಕಟಿಸಿದ "ಸುಲಿದ ಬಾಳೆಯ ಹಣ್ಣಿನಂದದಿ' ಪ್ರಾಚಿನ ಕನ್ನಡ ಕಾವ್ಯಗಳ ರಸಸ್ವಾದನೆ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಳೆಗನ್ನಡವೇ ಬೇಡ ಎನ್ನುವ ಮನಸ್ಸುಗಳು ಇಂದು ಇರುವುದು ಸರಿಯಾದದ್ದಲ್ಲ. ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ವಾರಕ್ಕೊಂದು ಉಪನ್ಯಾಸವಾಗಬೇಕು. ಸಂ ಹೊರಡಿಸುತ್ತಿದ್ದ ವಾಗ್ಭೂಷಣ ಪತ್ರಿಕೆ ನಿರಂತರವಾಗಿ ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೃತಿ ಕುರಿತು ಶಾಂತಿನಾಥ ದಿಬ್ಬದ ಮಾತನಾಡಿ, ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂಬಂತೆ ಹಳೆಗನ್ನಡ, ಹೊಸಗನ್ನಡ ಕೂಡಿ ಬೆಳದಾಗಲೇ ಅದಕ್ಕೊಂದು ಸೊಬಗುಂಟು. ಹಳೆಗನ್ನಡದಲ್ಲಿ ಏನಿದೆ ಎಂದು ಕೇಳುವ ಬದಲು ಏನಿಲ್ಲ ಎಂದು ನೋಡುವ ಮನೋವೃತ್ತಿ ಪ್ರತಿಯೊಬ್ಬರಲ್ಲೂ ಬರಬೇಕಿದೆ. ಕಾವ್ಯ ರಚನೆಯಲ್ಲಿ ನಾಡಿನ ಸಂಸತಿ ಅಡಕವಾಗಿದೆ. ಕಾವ್ಯಕ್ಕೆ ಮೋಡಿ ಮಾಡುವ ಶಕ್ತಿಯಿದೆ. ಕಲ್ಪನೆಗಳ ಕಾರಣಗಳಿಂದ ಕಾವ್ಯ ಜನಪ್ರಿಯವಾಗುತ್ತದೆ. ಓದುಗರಲ್ಲಿ, ವಿದ್ಯಾಥಿರ್ಗಳಲ್ಲಿ ಆಸಕ್ತಿ ಮೂಡಿಸುವ ಕೆಲಸವನ್ನು ಓದಿಸುವವರು, ಬೋಧಿಸುವವರು ಮಾಡಬೇಕು ಎಂದರು.
ಕೃತಿ ಸಂಪಾದಕ ವೆಂಕಟೇಶ ಮಾಚಕನೂರ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂದ ಅಧ್ಯ ಚಂದ್ರಕಾಂತ ಬೆಲ್ಲದ, ಡಾ. ಚಿದಾನಂದ ಮಾಸನಕಟ್ಟಿ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವಿಶ್ವೇಶ್ವರಿ ಹಿರೇಮಠ, ಡಾ. ಕೆ. ಆರ್​. ದುರ್ಗಾದಾಸ, ಪ್ರೊ. ಬಿ.ಎಸ್​. ಶಿರೋಳ, ಕೆ.ಎಚ್​. ನಾಯಕ, ಎಂ.ಎಂ. ಚಿಕ್ಕಮಠ, ನರಸಿಂಹ ಪರಾಂಜಪೆ, ಜಿ. ಸಿ. ತಲ್ಲೂರ, ನಿಂಗಣ್ಣ ಕುಂಟಿ, ಡಾ. ಡಿ.ಎಂ. ಹಿರೇಮಠ, ಶ್ರೀನಿವಾಸ ವಾಡಪ್ಪಿ, ಈರಣ್ಣ ಇಂಜನಗೇರಿ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net