ಹಳೇ ವೈಷಮ್ಯ: ಯುವಕನಿಗೆ ಚಾಕು ಇರಿತ

Crime_20250427000801999.jpg
Published on

ಹುಬ್ಬಳ್ಳಿ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ, ಯುವಕನೊಬ್ಬನಿಗೆ ಚಾಕು ಹಾಕಿದ ಘಟನೆ ನಗರದ ಮಠಪತಿ ಗಲ್ಲಿಯಲ್ಲಿ ಭಾನುವಾರ ನಡೆದಿದೆ. ಜಿದ್ದಿ ಮಲ್ಲಿಕ್ ಎಂಬಾತನಿಗೆ ಜಮೀರ್ ಅಲಿಯಾಸ್ ಜಮ್ಮು ಎನ್ನುವಾತ ಚಾಕು ಹಾಕಿದ್ದಾನೆ. ಕೆಲ ದಿನಗಳ ಹಿಂದೆಯೂ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತದೇ ವಿಚಾರಕ್ಕೆ ಗಲಾಟೆ ನಡೆದಿರುವುದಾಗಿ ತಿಳಿದುಬಂದಿದೆ. ಸದ್ಯ ಗಾಯಗೊಂಡ ವ್ಯಕ್ತಿಯನ್ನು ಕೆಎಂಸಿಆರ್‌ಐಗೆ ರವಾನಿಸಲಾಗಿದೆ. ಸ್ಥಳಕ್ಕೆ ಘಂಟಿಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net