ಎರಡು ಕುಟುಂಬಗಳ ನಡುವೆ ಹಳೇ ವೈಷಮ್ಯ, ಮಾರಕಾಸ್ತ್ರಗಳಿಂದ ಐವರ ಮೇಲೆ ದಾಳಿ

IMG_20251003_234517.jpg
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಉಪ್ಪರಪೇಟೆಯಲ್ಲಿ  ಲಾಂಗು ಮತ್ತು ಮಚ್ಚುಗಳು ಹಿಡಿದುಕೊಂಡು ಬಂದು ಗುಂಪೊಂದು ಐವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ‌.‌ ಘಟನೆಗೆ ಹಳೇ ವೈಷಮ್ಯವೇ ಪ್ರಮುಖ ಕಾರಣ ಎನ್ನಲಾಗಿದೆ.
ಹಲ್ಲೆಗೆ ಒಳಗಾದ ಗಾಯಾಳುಗಳು ಉಪ್ಪರಪೇಟೆಯ ಎಂ ಶಫಿ, ಅರ್ಬಾಜ್, ಜುನೇದ್ ಅಹಮದ್, ಜಮೀಲ್ ಮತ್ತು  ಆಖೀಲ್ ಅಹಮದ್. ಇನ್ನೂ  ಹಲ್ಲೆ ಮಾಡಿದ ಆರೋಪಿಗಳು ಖಲಾಂದರ್ ಪಾಷ ಅಲಿಯಾಸ್ ಬಾಬು, ಸನ್‌ವಿದ್ ಶರೀಫ್, ಜಿಶಾನ್ ಶರೀಪ್, ಫಿರ್ದೋಸ್ ಶರೀಫ್. ಎರಡು ಕುಟುಂಬಗಳ ನಡುವೆ ಮೊದಲಿನಿಂದಲೂ ಹಳೇ ದ್ವೇಷ ಇತ್ತು. ಇದರ ಹಿನ್ನೆಲೆಯಲ್ಲಿ ಒಂದು ತಂಡವು ಇನ್ನೊಂದು ಕುಟುಂಬದ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ತೀವ್ರವಾಗಿ ಗಾಯಗೊಂಡ ಜುನೇದ್ ಮತ್ತು ಅರ್ಬಾಜ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆಯ ಎಂವಿಜಿ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಂತಾಮಣಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net