ಹಳೇ ಚಿನ್ನಾಪುರದಲ್ಲಿ ಚಿರತೆ ದಾಳಿಗೆ ಮೇಕೆ ಬಲಿ

Kampli leoprad
Published on

ಕಂಪ್ಲಿ: ತಾಲೂಕಿನ ಹಳೇ ಚಿನ್ನಾಪುರ ಗ್ರಾಮದ ಕೆರೆ ತಾಯಮ್ಮ ದೇವಸ್ಥಾನ ಹಿಂಭಾಗದಲ್ಲಿ ಬುಧವಾರ ತಡರಾತ್ರಿ ಚಿರತೆಯೊಂದು ಕುರಿ ಹಟ್ಟಿ ಮೇಲೆ ದಾಳಿ ಮಾಡಿ ಮೇಕೆಯೊಂದನ್ನು ಕೊಂದಿದೆ.

ತೆಲುಗರ ರಾಮಾಂಜನಿ ಅವರ ಕುರಿಹಟ್ಟಿಯಲ್ಲಿ ಸುಮಾರು 70 ಕುರಿ, ಆಡು, ಮೇಕೆಗಳಿದ್ದವು. ಚಿರತೆ ಏಕಾಏಕಿ ದಾಳಿ ಮೇಕೆಯನ್ನು ಕೊಂದು ಹಾಕಿದೆ. ನಾಯಿಗಳು ಬೊಗಳಿದ್ದರಿಂದ ಗ್ರಾಮಸ್ಥರು ಎಚ್ಚೆತ್ತು ಗಲಾಟೆ ಮಾಡಿ ಚಿರತೆಯನ್ನು ಓಡಿಸಿದ್ದಾರೆ. ಮೆಟ್ರಿಯ ಕಿರಿಯ ಪಶು ಪರೀಕ್ಷಕ ಕೆ.ಮಂಜುನಾಥ ಮತ್ತು ಅರಣ್ಯರಕ್ಷಕ ಕೆ.ಅಂಜಿನಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದ ಹೊರವಲಯದಲ್ಲಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನರು ಆತಂಕಗೊಂಡಿದ್ದಾರೆ. ತಕ್ಷಣ ಬೋನು ಅಳವಡಿಸುವಂತೆ ಒತ್ತಾಯಿಸಿದ್ದಾರೆ. ಚಿರತೆ ಸೆರೆಗಾಗಿ ಬೋನು ಇರಿಸಲಾಗುವುದು ಎಂದು ಅರಣ್ಯರಕ್ಷಕ ಕೆ.ಅಂಜಿನಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net