ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

mng--16 july sayyad Hasainar
Published on

ಮಂಗಳೂರು: ಪ್ರಕರಣವೊಂದರಲ್ಲಿ ಶಿಕ್ಷೆಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಕರ್ಮರ್ ನಿವಾಸಿ ಸೈಯದ್ ಹಸೈನಾರ್ (35) ಬಂಧಿತ.


ಮಂಗಳೂರು ಜೆಎಂಎಫ್‌ಸಿ 3 ನೇ ನ್ಯಾಯಾಲಯ ಈತನಿಗೆ 2014 ಅ.18ರಂದು 4 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಿತ್ತು. ಅಪರಾಧಿಯು ಸುಮಾರು 9 ವರ್ಷಗಳಿಂದ ತಲೆಮರಿಸಿಕೊಂಡಿದ್ದು ಜು.15ರಂದು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತ ಕುಲ್‌ದೀಪ್ ಕುಮಾರ್ ಆರ್ ಜೈನ್ ಅವರು ತಲೆಮಾರೆಸಿಕೊಂಡ ವಾರೆಂಟ್ ಆರೋಪಿಯ ಬಂಧನದ ಬಗ್ಗೆ ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಿದ್ದು, ಡಿಸಿಪಿಗಳಾದ ಅಂಶು ಕುಮಾರ್ ಹಾಗೂ ದಿನೇಶ್ ಕುಮಾರ್ ಅವರ ಸೂಕ್ತ ಸಲಹೆಯೊಂದಿಗೆ ಎಸಿಪಿ ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಉರ್ವಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net