ಹಳೇ ಬೈಕ್ ಮಾರಾಟಗಾರರ ಸಂಘಕ್ಕೆ ಆಯ್ಕೆ

IMG_20240704_210936_959.jpg
Published on

ಹುಬ್ಬಳ್ಳಿ: ಇಲ್ಲಿಯ ಡಾಕಪ್ಪ ಸರ್ಕಲ್ ನಲ್ಲಿರುವ ಹಳೇ ದ್ವಿಚಕ್ರ ವಾಹನ ಮಾರಾಟಗಾರರ ಹಾಗೂ ಮಧ್ಯವತಿರ್ಗಳ ಸಂಘದ ವಾರ್ಷಿಕ ಸಭೆ ಗುರುವಾರ ನಡೆಯಿತು.

2024ರಿಂದ 2027ರ ವರೆಗಿನ ಅವಧಿಗೆ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ ದಾಬಡೆ ಮಾತನಾಡಿ, ತಮ್ಮಅವಧಿಯಲ್ಲಿ ಸಂಘದ ಸದಸ್ಯರಿಗೆ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಉಪಾಧ್ಯಕ್ಷರಾಗಿ ರಮೇಶ ಕಲಾಲ, ವೆಂಕಟೇಶ್ ಕುಲಕರ್ಣಿ, ರುದ್ರಪ್ಪ ಜಂಬೂಶಿರ್, ಮೋಹನ್ ಹಿಪ್ಪರಗಿ, ಕಾರ್ಯದರ್ಶಿಯಾಗಿ ರಾಜು ಕೋರ್ಯಾಣಮಠ, ಸಹ ಕಾರ್ಯದರ್ಶಿಗಳಾಗಿ ಮಕ್ಬುಲ್ ಸಿರ್ಸಿ, ರಾಜೇಶ ಪವಾರ, ಸಂತೋಷ ಬಂಡಾರಿ, ರಫೀಕ ಗದವಾಲ, ಗಣಪತಿ ಬಾಕಳೆ, ಖಜಾಂಚಿಯಾಗಿ ಕಮಲಾಕರ ಊರಣಕರ, ಸಹ ಖಜಾಂಚಿಯಾಗಿ ಗಿರೀಶ ತೆನ್ನಳ್ಳಿ, ಸಲಹೆಗಾರರಾಗಿ ಅಕ್ಬರ್ ಖಾನ್, ಶ್ರೀನಿವಾಸ್ ಕಲಾಲ, ರಮೇಶ ಮುತ್ತಗಿ, ಏಕನಾಥ ಪವಾರ, ಸಾಧಿಕ ಮುಚ್ಚಾಲೆ ಅವರನ್ನು ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net