ಹಳೇ ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಯಾಗಲಿ

30 MASKI 02
ಮಸ್ಕಿ ಬಸ್ ಡಿಪೋ ವ್ಯವಸ್ಥಾಪಕ ಆದಪ್ಪ ಅವರಿಗೆ ಡಿಎಸ್‌ಎಸ್ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಸದಸ್ಯರಾದ ಹನುಮಂತಪ್ಪ ವೆಂಕಟಾಪುರು, ಮಲ್ಲಯ್ಯ ಬಳ್ಳಾ, ಸುರೇಶ ಅಂತರಗಂಗಿ, ಮೌನೇಶ ಸುಲ್ತಾನಪೂರ, ಹನುಮಂತ ಮೆದಿಕಿನಾಳ ಇತರರಿದ್ದರು.
Published on

ಮಸ್ಕಿ: ಪಟ್ಟಣದ ಹಳೇ ಬಸ್‌ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಬಸ್ ನಿಲುಗಡೆಗೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಸೋಮವಾರ ಬಸ್ ಡಿಪೋ ವ್ಯವಸ್ಥಾಪಕ ಆದಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಹನುಮಂತಪ್ಪ ವೆಂಕಟಾಪುರು ಹಾಗೂ ಮಲ್ಲಯ್ಯ ಬಳ್ಳಾ ಮಾತನಾಡಿ, ಪಟ್ಟಣದಲ್ಲಿ ಹಳೇ ಬಸ್‌ನಿಲ್ದಾಣದಲ್ಲಿ ಈಗ ಯಾವುದೇ ಬಸ್‌ಗಳನ್ನು ನಿಲುಗಡೆ ಮಾಡುತ್ತಿಲ್ಲ. 60-70 ವರ್ಷಗಳಿಂದ ಇದ್ದ ಮಸ್ಕಿಯ ಹಳೇ ಬಸ್ ನಿಲ್ದಾಣದಲ್ಲಿ ಈಗ ಏಕಾಏಕಿ ಬಸ್‌ಗಳನ್ನು ನಿಲ್ಲದಂತೆ ಮಾಡಿದ್ದರಿಂದ ವಯೋವೃದ್ಧರು, ಚಿಕ್ಕಮಕ್ಕಳು, ಅಂಗವಿಕಲರು ಹಾಗೂ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.

ಗ್ರಾಮೀಣ ಪ್ರದೇಶ ಪ್ರಯಾಣಿಕರ ಹಿತದೃಷ್ಟಿಯಿಂದ ಡಿಪೋದಿಂದ 4 ರೂಟ್‌ಗಳಿದ್ದು, ಮಸ್ಕಿ-ಸಿಂಧನೂರು, ಸಿಂಧನೂರು-ಲಿಂಗಸೂರು, ಕವಿತಾಳ-ಸಿಂಧನೂರು ಮತ್ತು ಬಳಗಾನೂರು-ಸಿಂಧನೂರಿಗೆ ಸಿಟಿ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.

ಸದಸ್ಯರಾದ ಸುರೇಶ ಅಂತರಗಂಗಿ, ಮೌನೇಶ ಸುಲ್ತಾನಪೂರ, ಜಯಪ್ಪ ಮೆದಿಕಿನಾಳ, ನಾಗರಾಜ ಕುಣೆಕೆಲ್ಲೂರು, ದಾನಪ್ಪ ಮೆದಿಕಿನಾಳ, ಹನುಮಂತಪ್ಪ ಹಂಪನಾಳ, ಸಂಪತ್ ನಂಜಲದಿನ್ನಿ, ಹನುಮಂತ ಮೆದಿಕಿನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net