

ಸವದತ್ತಿ: ಪಟ್ಟಣದ ಶ್ರೀ ಆಥೋರ್ಪೆಡಿಕ್ ಆಸ್ಪತ್ರೆಯಲ್ಲಿ ಚಪ್ಪೆ ನೋವಿನಿಂದ ಬಳಲುತ್ತಿದ್ದ 90 ವರ್ಷದ ವೃದ್ಧೆಯ ಚಪ್ಪೆ ಬದಲಾವಣೆ ಶಸ್ತ್ರ ಚಿಕಿತ್ಸೆಯನ್ನು ಎಲುಬು ಕೀಲು ತ ಡಾ.ಹೇಮಂತ ಭಸ್ಮೆ, ಡಾ.ನಯನಾ ಭಸ್ಮೆ, ಡಾ.ಹರಿಕಷ್ಣ, ಡಾ.ಓಂಕಾರ, ಡಾ.ಶ್ರುತಿ ಹಾಗೂ ತಂಡ ಯಶಸ್ವಿಯಾಗಿ ನೆರವೇರಿಸಿದ್ದಾರೆ. ಮೂಳೆ ಮುರಿತದಿಂದ (ಚಪ್ಪೆ )ಭಾಗದಲ್ಲಿ ನೋವು ಆಗಿತ್ತು. ರೋಗಿಯ ನೋವು ನಿವಾರಣೆ ಮಾಡಲು ವೆದ್ಯರು ಕೀಲು ಬದಲಾವಣೆ ಶಸ ಚಿಕಿತ್ಸೆ ನೆರವೇರಿಸಿದ್ದಾರೆ. ಯಶಸ್ವಿನಿ ಮತ್ತು ಅಯುಷ್ಮಾನ್ ಭಾರತ ಯೋಜನೆ ಸೌಲಭ್ಯ ಶ್ರೀ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಎಲುಬು ಕೀಲು ತ ಡಾ.ಹೇಮಂತ ಭಸ್ಮೆ ಕೋರಿದ್ದಾರೆ.