

ಕುಣಿಗಲ್ : ತೀವ್ರ ಗದ್ದಲ, ಕೂಗಾಟದ ನಡುವೆ ಪೊಲೀಸ್ ಬಂದೋಬಸ್ತ್‌ನಲ್ಲಿ ತಾಲೂಕು ಒಕ್ಕಲಿಗ ಸಂಘದ ಎರಡು ಬಣದವರಿಂದ ಪ್ರತ್ಯೇಕವಾಗಿ ಸಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಗಳು ಸೋಮವಾರ ನಡೆದವು.
ಸಂದ ಆವರಣದಲ್ಲಿ ವಾರ್ಷಿಕ ಮಹಾಸಭೆ ಕರೆಯಲಾಗಿತ್ತಾದರೂ ಮುಖಂಡರಲ್ಲಿ ಒಮ್ಮತ ಮೂಡದೆ ಮಾಜಿ ಅಧ್ಯಕ್ಷ ಬಿ.ಬಿ.ರಾಮಸ್ವಾಮಿಗೌಡ ಹಾಗೂ ಹಾಲಿ ಅಧ್ಯಕ್ಷ ಕೆ.ಎನ್.ನಂಜುಂಡಯ್ಯ ಬಣಗಳು ಪ್ರತ್ಯೇಕವಾಗಿ ವಾರ್ಷಿಕ ಸಭೆ ನಡೆಸಿದವು.
ಸಭೆಗೂ ಮುನ್ನ ಸಂಘದ ಕಚೇರಿಯಲ್ಲಿ ಪದಾಧಿಕಾರಿಗಳು ಹಾಗೂ ನಿರ್ದೇಶಕರಾದ ಬಿ.ಬಿ.ರಾಮಸ್ವಾಮಿಗೌಡ, ಕೆ.ಎನ್.ನಂಜುಂಡಯ್ಯ, ಜಿ.ಕೆ.ಅನಂತಯ್ಯ, ಬಿ.ಎಂ.ಹುಚ್ಚೇಗೌಡ, ಕುಂದೂರು ನರಸಿಂಹಯ್ಯ, ಗಂಗಶಾನಯ್ಯ, ಎಚ್.ಎಂ.ಬಲರಾಮ್‌ರಾಜು, ಜಿ.ಟಿ.ರಾಜಣ್ಣ, ಪುಟ್ಟಸ್ವಾಮಯ್ಯ ಅವರು ಎರಡು ಗಂಟೆ ಗೌಪ್ಯ ಸಭೆ ನಡೆಸಿದರು. ಹೊರಗೆ ಬಂದ ಬಿ.ಬಿ.ರಾಮಸ್ವಾಮಿಗೌಡ ಹಾಗೂ ಹುಚ್ಚೇಗೌಡ ನಡುವೆ ತೀವ್ರ ವಾಗ್ವಾದ ನಡೆಯಿತು. ಪಿಎಸ್‌ಐ ಎಸ್.ವಿಕಾಸ್‌ಗೌಡ ಪರಿಸ್ಥಿತಿ ನಿಯಂತ್ರಿಸಿದರು.
ವಾಗ್ವಾದ: ಕೆಲ ಸದಸ್ಯರ ಸಂಧಾನದಿಂದ ವಾರ್ಷಿಕ ಸಭೆ ಅಧ್ಯಕ್ಷ ಕೆ.ಎನ್.ನಂಜುಂಡಯ್ಯ ನೇತೃತ್ವದಲ್ಲಿ ಪ್ರಾರಂಭವಾಯಿತು. ಆದರೆ, ಕೋರ್ಟ್‌ನಲ್ಲಿ ಪ್ರಕರಣ ಇರುವುದರಿಂದ ಸಭೆ ಮುಂದೂಡಲಾಗಿದೆ ಎಂದು ಅಧ್ಯಕ್ಷ ನಂಜುಂಡಯ್ಯ ಘೋಷಿಸಿದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಅಧ್ಯಕ್ಷ ರಾಮಸ್ವಾಮಿಗೌಡ, ಸಭೆ ಏಕೆ ಮುಂದೂಡುತ್ತೀರಾ? ನಿಮ್ಮ ಅಧ್ಯಕ್ಷತೆಯಲ್ಲೇ ಸಭೆ ನಡೆಯಲಿ, ಸಭೆ ಮುಂದೂಡುವುದು ಬೇಡ ಎಂದರು. ಈ ನಡುವೆ ಸಭೆಯಲ್ಲಿ ಗೊಂದಲ ಉಂಟಾದ ಕಾರಣ ನಂಜುಂಡಯ್ಯ, ಕಾರ್ಯದರ್ಶಿ ಅನಂತಯ್ಯ, ಖಜಾಂಚಿ ಗಂಗಶಾನಯ್ಯ ಸಭೆಯಿಂದ ಹೊರನಡೆದರು. ಬಳಿಕ ಕೆಲ ಸದಸ್ಯರ ಒತ್ತಾಯದ ಮೇರೆಗೆ ಬಿ.ಬಿ.ರಾಮಸ್ವಾಮಿಗೌಡ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆದಾಗ, ನಾನು ಯಾವುದೇ ಅವ್ಯವಹಾರ ಮಾಡಿಲ್ಲ ಸಂಘಕ್ಕೆ ಮೋಸ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಧಿಕಾರ ದುರ್ಬಳಕೆ: ಸಂದ ಅಧ್ಯಕ್ಷ ಕೆ.ಎನ್.ನಂಜುಂಡಯ್ಯ, ಕಾರ್ಯದರ್ಶಿ ಜಿ.ಕೆ.ಅನಂತಯ್ಯ, ಖಜಾಂಚಿ ಗಂಗಶಾನಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿ, ಸಂದ ಕಾರ್ಯಕಾರಿ ಮಂಡಳಿಯ ಅನುಮತಿ ಪಡೆಯದೆ 32.68 ಲಕ್ಷ ರೂಪಾಯಿ ಸ್ವಂತಕ್ಕೆ ಬಳಿಸಿಕೊಂಡು ಅಧಿಕಾರ ದುರ್ಬಳಕೆ ವಾಡಿರುವ ಬಗ್ಗೆ ಅಡಾಕ್ ಸಮಿತಿ ವರದಿ ನೀಡಿದ ಮೇರೆಗೆ ಬಿ.ಬಿ.ರಾಮಸ್ವಾಮಿಗೌಡ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಉಪಾಧ್ಯಕ್ಷರಾಗಿದ್ದವರನ್ನು ಅಧ್ಯಕ್ಷರಾಗಿ (ಕೆ.ಎನ್.ನಂಜುಡಯ್ಯ) ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ನಕಲಿ ಐಡಿ ಕಾರ್ಡ್: ಸಂವು ಅಧಿಕೃತವಾಗಿ 203 ಸದಸ್ಯರನ್ನು ಹೊಂದಿದೆ. ಆದರೆ ರಾಮಸ್ವಾಮಿಗೌಡ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳಲು ಸುವಾರು 260 ಮಂದಿಗೆ ನಕಲಿ ಗುರುತಿನ ಚೀಟಿ ನೀಡಿದ್ದಾರೆ. ಆಶ್ಚರ್ಯವೆಂದರೆ ಸೋಬಗಾನಹಳ್ಳಿಯ ಜಯಮ್ಮಗೆ 1997ರ ಸದಸ್ಯತ್ವದ ಕಾರ್ಡ್‌ಗೆ ಸಹಿ ವಾಡಿ ಕೊಟ್ಟಿದ್ದಾರೆ. ಆದರೆ ಆ ವರ್ಷದಲ್ಲಿ ಬಿ.ಬಿ.ಆರ್.ಅಧ್ಯಕ್ಷರಾಗಿರಲಿಲ್ಲ. ಅವರು ನೀಡಿರುವ ಎಲ್ಲ ಕಾರ್ಡ್ ಬೋಗಸ್ ಆಗಿವೆ. ಬಿ.ಬಿ.ರಾಮಸ್ವಾಮಿಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದಿರುವ ವಾರ್ಷಿಕ ಸಭೆ ಕಾನೂನು ಬಾಹಿರವಾಗಿದೆ. ಹೀಗಾಗಿ ಸಂದ ಅಧಿಕೃತ ಅಧ್ಯಕ್ಷ ಕೆ.ಎನ್.ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಸಭೆ ನಡೆಸಲಾಗಿದೆ ಎಂದು ಗಂಗಶಾನಯ್ಯ ತಿಳಿಸಿದರು.