ಶಾಸಕತ್ವದಿಂದ ಮುನಿರತ್ನ ಅನರ್ಹಗೊಳಲಿ: ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣ ಆಗ್ರಹ

Okkaligara Sangha press conference Mandya
Published on

ಮಂಡ್ಯ: ಒಕ್ಕಲಿಗ ಹಾಗೂ ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೃಷ್ಣ ಆಗ್ರಹಿಸಿದರು.

ಜವಬ್ದಾರಿಯುತ ಸ್ಥಾನದಲ್ಲಿರುವ ಮುನಿರತ್ನ ಸಮುದಾಯಗಳ ಬಗ್ಗೆ ನಾಲಗೆ ಹರಿಬಿಟ್ಟಿರುವುದು ಖಂಡನೀಯ. ಯಾವುದೇ ಸಮುದಾಯವಾದರೂ ಅವಹೇಳನ ಮಾಡುವುದು ಸರಿಯಲ್ಲ. ಆಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ. ಅದರಲ್ಲಿನ ಮಾತು ಮುನಿರತ್ನ ಅವರದೇ ಎನ್ನುವುದು ಖಚಿತವಾದ ಬಳಿಕ ರಾಜ್ಯಾದ್ಯಂತ ಹೋರಾಟ ಮಾಡುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ಸಮುದಾಯ ಕುರಿತು ಲಘುವಾಗಿ ಮಾತನಾಡಿರುವ ಮುನಿರತ್ನ ವಿರುದ್ಧ ಮುಂದಿನ ದಿನದಲ್ಲಿ ಹೋರಾಟ ಮಾಡಲಾಗುವುದು ಎಂದರು.

ಸಂಘದ ಸುಜಾತಾಕೃಷ್ಣ, ಎಂ.ಕೆ.ಕುಮಾರ್, ಕೃಷ್ಣೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net