

ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕರಿಯ ಎಂದು ಜನಾಂಗೀಯ ನಿಂದನೆ ಮಾಡಿರುವ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ಖಂಡನಾರ್ಹ ಎಂದು ಜಿಲ್ಲಾ ಒಕ್ಕಲಿಗ ಸಂಘದ ಅಧ್ಕಕ್ಷ ತಿಮ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿ, ನಿನ್ನ ಕುಟುಂಬವನ್ನು ಖರೀದಿ ಮಾಡುತ್ತೇನೆ ಎಂದಿದ್ದಾರೆ. ಮಂಡ್ಯದಲ್ಲಿ ಸಾಮರಸ್ಯದಿಂದ ಎಲ್ಲ ಧರ್ಮದವರು ಇದ್ದಾರೆ. ನಮ್ಮ ನಡುವೆ ಸೌಹಾರ್ದತೆ ಕದಡದಂತೆ ಮಾತಿನ ಮೇಲೆ ಹಿಡಿತ ಹೊಂದಬೇಕು. ಒಕ್ಕಲಿಗ ನಾಯಕನ ವಿರುದ್ಧ ಕೇವಲವಾಗಿ ಮಾತನಾಡಿರುವುದು ಜನಾಂಗಕ್ಕೆ ಮಾಡಿರುವ ಅಪಮಾನ. ಕೂಡಲೇ ಸಚಿವ ಜಮೀರ್ ಕ್ಷಮೆ ಕೇಳಬೇಕು. ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಸಂಘದ ಕೆಂಪರಾಜು, ಚನ್ನೇಗೌಡ, ಶ್ರೀಧರ್, ನಿಂಗರಾಜು ಇದ್ದರು.