ಒಕ್ಕಲಿಗರ ಸೇವಾ ಸಮಿತಿ ಆಟಿಡೊಂಜಿ ಕೂಟ

aati
ಆಟಿಡೊಂಜಿ ಕೂಟದಲ್ಲಿ ಅಂಗನವಾಡಿ ಕಾರ್ಯಕರ್ತೆ ರಾಜೀವಿ ಅವರನ್ನು ಗೌರವಿಸಲಾಯಿತು. ಹಿರಿಯ ಶಿಕ್ಷಕಿ ಮೋಹನಾಂಗಿ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ದಾಚೆ, ಬೆಳ್ತಂಗಡಿ ತಾಲೂಕು ಗೌಡರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮತ್ತಿತರರಿದ್ದರು.
Published on

ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ನಡ, ಕನ್ಯಾಡಿ ಗ್ರಾಮ ಸಮಿತಿ ಮಹಿಳಾ ವೇದಿಕೆ ವತಿಯಿಂದ ಒಂಬತ್ತನೇ ವರ್ಷದ ಆಟಿಡೊಂಜಿ ಕೂಟ ಇತ್ತೀಚೆಗೆ ನಡೆಯಿತು.

ವಾಣಿ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕಿ ಮೋಹನಾಂಗಿ ಉದ್ಘಾಟಿಸಿದರು. ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ್ ನಿಡ್ದಾಚೆ ಮಾತನಾಡಿ, ಆ.18ರಂದು ನಡೆಯುವ ಗೌಡರ ಕೆಸರ್ ಗಮ್ಮತ್ತು ಕ್ರೀಡಾಕೂಟದ ಬಗ್ಗೆ ಮಾಹಿತಿ ನೀಡಿದರು. ಬೆಳ್ತಂಗಡಿ ತಾಲೂಕು ಗೌಡರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮಾತನಾಡಿದರು.

ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಿಸಲಾಯಿತು. ನಡದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರಾಜೀವಿ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ವೇದಿಕೆಯ ಅಧ್ಯಕ್ಷೆ ಸೌಮ್ಯಲತಾ ಯತೀಶ ಗೌಡ, ಗೌರವಾಧ್ಯಕ್ಷೆ ಮಮತಾ ಶ್ರೀನಾಥ್, ಪ್ರಮುಖರಾದ ರತ್ನಾವತಿ ಲೋಕೇಶ್, ತಾಲೂಕು ಸಮಿತಿ ಜತೆ ಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ತಾಲೂಕು ಸಮಿತಿ ನಿರ್ದೇಶಕ ವಸಂತ ಗೌಡ ವಿ.ಜಿ. ಕೊಯ ಗುಡ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net