ಒಕ್ಕಲಿಗ ಸಂಘ ವರಮಹಾಲಕ್ಷ್ಮೀ ವ್ರತಪೂಜೆ

Bel_Varamaha
Published on

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಮಹಿಳಾ ವೇದಿಕೆ ನೇತೃತ್ವದಲ್ಲಿ ಹಾಗೂ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಸಹಯೋಗದೊಂದಿಗೆ ವರಮಹಾಲಕ್ಷ್ಮೀ ವ್ರತಪೂಜೆ ಎಸ್‌ಪಿ ಆಯಿಲ್ ಮಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ ವಹಿಸಿದ್ದರು. ಧಾರ್ಮಿಕ ಉಪನ್ಯಾಸ ಸುಲೋಚನಾ ಸಂಜೀವ ಗೌಡ ಪಾಂಚಜನ್ಯ ನೀಡಿ ವರಮಹಾಲಕ್ಷ್ಮೀ ವ್ರತದ ಮಹತ್ವ ತಿಳಿಸಿದರು.

ಒಕ್ಕಲಿಗ ಗೌಡರ ಸಂಘ ಅಧ್ಯಕ್ಷ ಕೇರಿಮಾರು ಬಾಲಕೃಷ್ಣ ಗೌಡ, ವಿಜಯ್ ಗೌಡ ವೇಣೂರು ಸದಸ್ಯರು ಒಕ್ಕಲಿಗ ಸೇವಾ ಸಂಘ ದ.ಕ.ಜಿಲ್ಲೆ, ಮೋಹನ್ ಗೌಡ ಕಲ್ಮಂಜ ಅಧ್ಯಕ್ಷರು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್, ಸೂರಜ್ ವಲಂಬ್ರ ಜತೆ ಕೋಶಾಧಿಕಾರಿ ಒಕ್ಕಲಿಗರ ಸೇವಾ ಸಂಘ ದ.ಕ.ಜಿಲ್ಲೆ, ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ರಂಜನ್ ಜಿ.ಗೌಡ, ಶ್ರೀಕಾಲಭೈರವೇಶ್ವರ ಒಕ್ಕಲಿಗ ಗೌಡರ ಸೌಹಾರ್ದ ಸಹಕಾರಿ ಉಜಿರೆ ನಿರ್ದೇಶಕ ದಾಮೋದರ ಗೌಡ ಸುರುಳಿ, ಒಕ್ಕಲಿಗ ಗೌಡರ ಸೇವಾ ಸಂಘ ದ.ಕ. ಜತೆ ಕಾರ್ಯದರ್ಶಿ ಸೌಮ್ಯಲತಾ, ಒಕ್ಕಲಿಗರ ಸೇವಾ ಸಂಘ ದ.ಕ.ಜಿಲ್ಲೆ ಸದಸ್ಯ ಜಯಂತ ಗೌಡ ಉಪಸ್ಥಿತರಿದ್ದರು.

ಯಶೋದಾ ರಾಘವೇಂದ್ರ ಗೌಡ ಸ್ವಾಗತಿಸಿ, ಅನುಪಮಾ ಸತೀಶ್ ಗೌಡ ವಂದಿಸಿ, ಪ್ರಕಾಶ್ ಗೌಡ ಕೆದ್ಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net