ಕುಣಿಗಲ್ : ತಾಲೂಕು ಒಕ್ಕಲಿಗ ಸಂದ ಜಟಾಪಟಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಸಂದ ಅಧ್ಯ ಕ್ಷ, ಕಾರ್ಯದರ್ಶಿ ಮತ್ತು ಚಾರ್ರ್ಟಡ್ ಅಕೌಂಟೆಂಟರ್ಗಳು ಸಂದ ಆಡಿಟ್ ರಿಪೋರ್ಟ್ ಮತ್ತು ಕಾರ್ಯಕಾರಣಿ ಸಮಿತಿ ಸದಸ್ಯರ ಪಟ್ಟಿ ಹಾಗೂ ಬೈಲಾ ತಿದ್ದುಪಡಿ ಮಾಡಿ, ಸುಳ್ಳು ದಾಖಲೆ ಸೃಷ್ಟಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ಸಂಘದ ಅಧ್ಯ ಕ್ಷ ಬಿ.ಬಿ.ರಾಮಸ್ವಾಮಿಗೌಡ, ಕಾರ್ಯದರ್ಶಿ ಎಚ್.ಜಿ.ಚನ್ನಪ್ಪ, ಚಾರ್ರ್ಟಡ್ ಅಕೌಂಟೆಂಟ್ ಕೆ.ಎಲ್.ಪುರುಷೋತ್ತಮ್ ವಿರುದ್ಧ ಸದಸ್ಯರಾದ ಜಿ.ಎ.ಜಗದೀಶ್, ವೈ.ಎಸ್ ಅರುಣ್ಕುಮಾರ್ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಇರುವುದೇನು?: ಒಕ್ಕಲಿಗರ ಸಂದಿಂದ 2022ರವರಗೆ ಅಧಿಕೃತ ಸರ್ವ ಸದಸ್ಯರ ಸಭೆಯನ್ನಾಗಲಿ, ಚುನಾವಣೆಯಾಗಲಿ ನಡೆಸಿಲ್ಲ ಎಂದು ಅಧ್ಯ ಬಿ.ಬಿ.ರಾಮಸ್ವಾಮಿಗೌಡ ಜಿಲ್ಲಾ ಸಂಗಳ ನೋಂದಣಾಧಿಕಾರಿಗಳ ಎದುರಿನ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ. ನಂತರ ಅಧ್ಯರ ಕೋರಿಕೆ ಮೇರೆಗೆ 2022ರ ಡಿ.23ರಂದು ಡಿಆರ್ ಅವರು ಹೈಕೋರ್ಟ್ ಆದೇಶದ ಮೇರೆಗೆ ಎಂದು ಸರ್ವ ಸದಸ್ಯರ ಸಭೆ ಮತ್ತು ಹೊಸ ಕಾರ್ಯಕಾರಿ ಮಂಡಳಿ ರಚಿಸಿ ಅಧಿಕಾರ ನೀಡಿದ್ದಾರೆ. ಈ ವೇಳೆ ಆಯ್ಕೆಯಾದ ಕಾರ್ಯದರ್ಶಿ ಎಚ್.ಜಿ.ಚನ್ನಪ್ಪ, ಅಧ್ಯ ಬಿ.ಬಿ.ರಾಮಸ್ವಾಮಿಗೌಡ ಮತ್ತು ಚಾರ್ರ್ಟಡ್ ಅಕೌಂಟೆಂಟ್ ಕೆ.ಎಲ್.ಪುರುಷೋತ್ತಮ್ ಅಧಿಕಾರ ದುರ್ಬಳಕೆ ಮಾಡಿಕೊಂಡು, ಸಂದ ಬೈಲಾ ನಿಯಮಗಳನ್ನು ತಿದ್ದುಪಡಿಮಾಡಿಕೊಂಡಿದ್ದಲ್ಲದೆ 2020&2021ನೇ ಸಾಲಿನ ಆಡಿಟ್ ವರದಿ ತಿದ್ದಿ, ಆಡಿಟ್ ರಿಪೋರ್ಟ್ನಲ್ಲಿನ ಸದಸ್ಯರ ಶುಲ್ಕ 25,500 ರೂ. ಮತ್ತು 5,100 ರೂ ಎಂದು ನಮೂದಾಗಿದ್ದನ್ನು ಕೈ ಬಿಟ್ಟಿದ್ದಾರೆ. ಹೊಸ ಆಡಿಟ್ ರಿಪೋರ್ಟ್ಅನ್ನು ಹಾಲಿ ಚಾರ್ರ್ಟಡ್ ಅಕೌಂಟೆಂಟ್ ಕೆ.ಎನ್.ಪುರುಷೋತ್ತಮ್ ಅವರಿಂದ ಮಾಡಿಸಿ ಆ ರಿಪೋರ್ಟ್ಗಳನ್ನು ಡಿಆರ್ಗೆ ಕಲಂ(13)ನಂತೆ ರಿರ್ಟನ್ ಪೈಲ್ ಮಾಡಿದ್ದಾರೆ. ಇದರ ಹಿಂದೆ 2019ರಿಂದ 2022ರವರೆಗೆ ಇದ್ದ ಸುಮಾರು 358 ಸದಸ್ಯರನ್ನು ಕೈಬಿಡುವುದಾಗಿದೆ ಎಂದು ಜಿ.ಎ.ಜಗದೀಶ್, ವೈ.ಎಸ್ ಅರುಣ್ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.
ನಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಮಾಹಿತಿ ತಿಳಿದಿಲ್ಲ. ಪೊಲೀಸರಿಂದಲೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಆಡಿಟ್ಅಲ್ಲಿ ಅನ್ಯಾಯವಾಗಿದ್ದರೆ ಡಿಆರ್ಗೆ ದೂರು ಸಲ್ಲಿಸಲಿ. - ಬಿ.ಬಿ.ರಾಮಸ್ವಾಮಿಗೌಡ, ಅಧ್ಯರು ತಾಲೂಕು ಒಕ್ಕಲಿಗ ಸಂಘ