ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗರ ಕೊಡುಗೆ ಅಪಾರ : ಮಾಜಿ ಸಂಸದ ಪ್ರತಾಪ್‌ಸಿಂಹ ಅನಿಸಿಕೆ : ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್

gowda 1
ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಕಾರ್ಯಕ್ರಮವನ್ನು ಲೋಕಯ್ಯಗೌಡ ಉದ್ಘಾಟಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಹರೀಶ್ ಪೂಂಜ, ಕುಶಾಲಪ್ಪ ಗೌಡ ಪೂವಾಜೆ ಮತ್ತಿತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕರ್ನಾಟಕದ ಇತಿಹಾಸದಲ್ಲಿ ಒಕ್ಕಲಿಗ ಸಮಾಜ ಕೊಡುಗೆ ಮಹತ್ತರವಾಗಿದ್ದು ಕೆಂಪೇಗೌಡ, ಎಸ್.ಎಂ.ಕೃಷ್ಣ, ದೇವೇಗೌಡರಂಥ ಮಹಾನುಭಾವರ ಚಿಂತನೆಗಳಿಂದ ಇಂದು ಕರ್ನಾಟಕ ದೇಶದ ಪ್ರಮುಖ ರಾಜ್ಯಗಳಲ್ಲೊಂದಾಗಿ ಗುರುತಿಸಿದೆ. ಹಿರಿಯರ ತ್ಯಾಗಗಳನ್ನು ಮುಂದಿನ ಪರಂಪರೆಗೆ ತಿಳಿಸಬೇಕಿದೆ. ಭಾಷೆಯ ನೆಪದಲ್ಲಿ ಒಕ್ಕಲಿಗ ಸಮಾಜ ವಿಂಗಡಣೆಗಳಿಂದ ಕೂಡಿದ್ದು, ಇದು ಒಂದಾಗಬೇಕು ರಾಜ್ಯದಲ್ಲಿ ಒಕ್ಕಲಿಗ ಸಮಾಜ ಒಂದಾಗಿ ಬಲಿಷ್ಠವಾಗಿ ಬೆಳೆಯಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಭಾನುವಾರ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಬೆಳ್ತಂಗಡಿ ತಾಲೂಕು ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ, ಬೆಳ್ತಂಗಡಿ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಚಂದ್ರಕಾಂತ ನಿಡ್ಪಾಜೆ ಕಾಲೇಜು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆಲುಕನ್ನು ಇಂದು ಮಾಡುತ್ತಿದ್ದಾರೆ. ಅವರ ಜತೆ ಇಡೀ ಒಕ್ಕಲಿಗ ಸಮಾಜ ಜತೆಯಾಗಿ ತುಳುನಾಡ ಸಂಸ್ಕೃತಿಯನ್ನು ಇಲ್ಲಿ ಬಿಂಬಿಸಿದೆ. ವಾಣಿ ಸೌಹಾರ್ದ ಸಂಘಕ್ಕೆ ಮತ್ತು ಯುವ ಗೌಡರ ವೇದಿಕೆಗೆ ಗರಿಷ್ಠ ಅನುದಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಜಿಲ್ಲಾಧ್ಯಕ್ಷ ಲೋಕಯ್ಯ ಗೌಡ ಉದ್ಘಾಟಿಸಿದರು. ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆಳ್ತಂಗಡಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿದ್ದರು.

ಆವಿಷ್ಕಾರ ಯೋಗ ಮಂಗಳೂರು ಸ್ಥಾಪಕ ಕುಶಾಲಪ್ಪ ಗೌಡ ನೆಕ್ಕರಾಜೆ, ಮಾಜಿ ಸೈನಿಕರಾದ ಕಾಂತಪ್ಪ ಗೌಡ, ಮಂಜುನಾಥ ಕೆ.ಎ, ಲಕ್ಷ್ಮಣ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ತುಳು ಜಾನಪದ ಶೈಲಿಯ ಪಥ ಸಂಚಲನ ನಡೆಯಿತು.

ಮಾಜಿ ಸೈನಿಕರನ್ನು ಗೌರವಿಸಲಾಯಿತು.
ಮಾಜಿ ಸೈನಿಕರನ್ನು ಗೌರವಿಸಲಾಯಿತು.

ಪ್ರಮುಖರಾದ ಎಚ್.ಪದ್ಮ ಗೌಡ, ಗಣೇಶ್ ಗೌಡ, ನಾಗೇಶ್ ಕುಮಾರ್, ಡಾ.ಪ್ರೇಮ್ ಕುಮಾರ್, ಭಾಸ್ಕರ್ ಗೌಡ ದೇವಸ್ಯ, ಅಕ್ಷಯ್ ಕುಮಾರ್ ಕುರುಂಜಿ, ಕಿರಣ್‌ಚಂದ್ರ ಪುಷ್ಪಗಿರಿ, ಆನಂದ ಗೌಡ ಎಚ್.ಪಿ., ಕೃಷ್ಣಪ್ಪ ಗೌಡ ಸವಣಾಲು, ನವೀನ್ ಚಂದ್ರ ಭೋಜಾರ, ಸುರೇಶ್ ಬೈಲು, ಮೋನಪ್ಪ ಗೌಡ, ಗಂಗಾಧರ ಗೌಡ ಪಿ.ಎಸ್., ರವಿ ಮುಂಗ್ಲಿಮನೆ, ಎನ್.ಜತ್ತಣ್ಣ ಗೌಡ, ತಿಮ್ಮಪ್ಪ ಗೌಡ, ಗೀತಾ ರಾಮಣ್ಣ ಗೌಡ, ಪುರಂದರ ಗೌಡ, ಡಾ.ರಜತ್ ಎಚ್.ಪಿ., ಡಾ.ಕಿರಣ್ ಹರಿ, ಪ್ರತೀಶ್, ಪೂರ್ಣಿಮಾ, ಡಾ.ಕೃತಿಕಾ ಎಸ್.ತಂಗೆತ್ತಿಪಾಲು, ಕುಶಾಲಪ್ಪ ಗೌಡ, ಎಚ್.ಪದ್ಮ ಗೌಡ, ನಾರಾಯಣ ಗೌಡ ದೇವಸ್ಯ, ಧರ್ಣಪ್ಪ ಗೌಡ ಬಂದಾರು, ಚಂದ್ರಕಾಂತ್ ನಿಡ್ಡಾಜೆ, ಸುರೇಶ್ ಕೌಡಂಗೆ, ಪ್ರಶಾಂತ್ ಅಂತರ, ನಿತಿನ್ ಕಲ್ಮಂಜ, ರಂಜಿತ್ ಕಳೆಂಜ, ಗೀತಾ ರಾಮಣ್ಣ ಗೌಡ, ಸುಭಾಷಿಣಿ ಜನಾರ್ದನ ಗೌಡ, ಲೀಲಾ ಬೆಳಾಲ್ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಂಘದ ನಿರ್ದೇಶಕ ಗೋಪಾಲಕೃಷ್ಣ ಗುಲ್ಲೋಡಿ ಸ್ವಾಗತಿಸಿ, ವಾಣಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರಾದ ಮೀನಾಕ್ಷಿ ಮಹಾಬಲ ಗೌಡ, ಬೆಳ್ಳಿಯಪ್ಪ ನಿರೂಪಿಸಿದರು. ಗೌಡರ ಯಾನೆ ಒಕ್ಕಲಿಗ ಸಂಘದ ಮಾಜಿ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು ವಂದಿಸಿದರು.

ಕೆಸರ್ ಕಂಡೊಡು ಗೌಡೆರೆ ಗೌಜಿ ಗಮ್ಮತ್ ಕಾರ್ಯಕ್ರಮದಲ್ಲಿ 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಹೆಮ್ಮೆಯಾಗಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರು ಭಾಗವಹಿಸಿಪ್ರತಿಭೆ ಪ್ರದರ್ಶಿಸಿದರು. ತುಳುನಾಡ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದೇ ನಮ್ಮ ಉದ್ದೇಶ. ಮುಂದಿನ ವರ್ಷದಿಂದ ಇದಕ್ಕಿಂತಲೂ ಅದ್ದೂರಿಯಾಗಿ ಆಚರಿಸಲಾಗುವುದು. - ಚಂದ್ರಕಾಂತ ನಿಡ್ಪಾಜೆ, ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net