ಒಕ್ಕಲಿಗರ ಕ್ರೀಡೋತ್ಸವಕ್ಕೆ ಚಾಲನೆ

okkaliga
Published on

ಕುಶಾಲನಗರ:

ಕೊಡಗು ಜಿಲ್ಲಾ ಒಕ್ಕಲಿಗ ಗೌಡ ಯುವ ವೇದಿಕೆ, ಕುಶಾಲನಗರ ತಾಲೂಕು ಒಕ್ಕಲಿಗರ ಯುವ ವೇದಿಕೆ ಹಾಗೂ ಒಕ್ಕಲಿಗರ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏರ್ಪಡಿಸಿರುವ ಮೂರು ದಿನಗಳ ಕಾಲ ನಡೆಯುವ ಒಕ್ಕಲಿಗರ ಕ್ರೀಡೋತ್ಸವಕ್ಕೆ ಶುಕ್ರವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಂ.ಡಿ. ಕೃಷ್ಣಪ್ಪ ಚಾಲನೆ ನೀಡಿದರು.

ಮೊದಲ ದಿನ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಿದ್ದು, ಜಿಲ್ಲೆಯ ವಿವಿಧೆಡೆಯ 10 ತಂಡಗಳು ಇದರಲ್ಲಿ ಪಾಲ್ಗೊಂಡಿವೆ. ಭಾನುವಾರ ಪುರುಷರ ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ, ಶಾಟ್‌ಪುಟ್, ವಯಸ್ಕರು ಮತ್ತು ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಸಂದರ್ಭ ಉದ್ಯಮಿಗಳಾದ ನಾಗೇಶ್, ಎಂ. ಕೆ. ಮಂಜುನಾಥ್, ಕಿಕ್‌ಬಾಕ್ಸಿಂಗ್ ರಾಷ್ಟ್ರೀಯ ಚಾಂಪಿಯನ್ ಅಜ್ಞಾ ಅಮೀತ್, ಕುಶಾಲನಗರ ತಾಲೂಕು ಅಧ್ಯಕ್ಷ ಜೈರಾಜ್, ಪ್ರೊ ಕಬಡ್ಡಿ ಆಟಗಾರ ಅವಿನಾಶ್, ನಿರ್ದೇಶಕರಾದ ಎಂ.ಹೆಚ್. ಕಿರಣ್. ಚಂದ್ರಶೇಖರ್ ಹೇರೂರು, ಪ್ರವೀಣ್ ಸೋಮವಾರಪೇಟೆ, ಮೇಘನ್, ನವೀನ್, ವಿ.ಜೆ. ಸಂತೋಷ್ ಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net