ಓಜಸ್ವಿ ಕೆರಿಯರ್ ಕ್ಯಾಟಲಿಸ್ಟ್ ಕಾರ್ಯಕ್ರಮ

22
Published on

ಮಡಿಕೇರಿ:
ಆಟೋಮೊಬೈಲ್ ಮಾರಾಟ ಮತ್ತು ಸೇವಾ ವಲಯದಲ್ಲಿ ತರಬೇತಿ ಮತ್ತು ಉದ್ಯೋಗವಕಾಶಕ್ಕಾಗಿ ಎದುರು ನೋಡುತ್ತಿರುವವರಿಗಾಗಿ ಓಜಸ್ವಿ ಫೌಂಡೇಶನ್ ಮತ್ತು ಬೆಂಗಳೂರಿನ ಸುರಕ್ಷಾ ಕರಿಯರ್ ಅಕಾಡೆಮಿ ವತಿಯಿಂದ ಜೂ.28ರಂದು ಆಯ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪೊನ್ನಂಪೇಟೆಯ ಹಳ್ಳಿಗಟ್ಟುವಿನಲ್ಲಿ ಇರುವ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಅಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಆಟೋಮೊಬೈಲ್ ಉದ್ಯಮದಲ್ಲಿ ತಮ್ಮ ವೃತ್ತಿಜೀವನ ಆರಂಭಿಸುವ ಆಸಕ್ತಿ ಇರುವ ಯುವಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 9.30 ಗಂಟೆಗೆ ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಮೆಕ್ಯಾನಿಕಲ್ ಅಥವಾ ಅಟೋಮೊಬೈಲ್‌ನಲ್ಲಿ ಬಿಇ, ಡಿಪ್ಲಮೋ, ವೆಲ್ಟಿಂಗ್, ಫಿಟ್ಟಿಂಗ್, ಅಟೋಮೊಬೈಲ್, ಮೆಕ್ಯಾನಿಕಲ್‌ನಲ್ಲಿ ಐಟಿಐ, ಎಸ್‌ಎಸ್‌ಎಲ್‌ಸಿ (ಪುರುಷ ಅಭ್ಯರ್ಥಿಗಳು ಮಾತ್ರ), ಪಿಯುಸಿ, ಯಾವುದೇ ಪದವಿ ಪಡೆದಿರುವವರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಅವಕಾಶಗಳು ಲಭ್ಯವಿದೆ. ಈಗ ವ್ಯಾಸಂಗ ಮಾಡುತ್ತಿರುವವರಿಗೆ ಇಂಟರ್ನ್ಶಿಪ್‌ಗೂ ಅವಕಾಶವಿದೆ.
ಹೆಚ್ಚಿನ ವಿವರಗಳಿಗೆ 9886669924 / 7338473428 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು. ಗೂಗಲ್ ಫಾರ್ಮ್ ಲಿಂಕ್ https://docs.google.com/forms/d/e/1FAIpQLSdjf4mQlSeulnyEiM0xHhM0RM2gvE6e6-DD8Glkok-ZucF4tA/viewform
ನಲ್ಲಿ ಆಸಕ್ತರು ತಮ್ಮ ವಿವರ ಭರ್ತಿ ಮಾಡಿ ಕಳುಹಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net