ಎಣ್ಣೆ ಉತ್ಪಾದನಾ ತರಬೇತಿ ಶಿಬಿರ 8ರಿಂದ

31 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜೀವ ದಿತ ಗ್ರಾಮೀಣ ಅಭಿವೃದ್ಧಿ ಸಂದ ವತಿಯಿಂದ ಜೂ. 8, 9ರಂದು ಇಲ್ಲಿನ ಸಿಡಾಕ್​ ಸಂಸ್ಥೆಯಲ್ಲಿ ಗಾಣದ ಎಣ್ಣೆ ಉತ್ಪಾದನೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ಆಯೋಜಕ ಎಂ.ಡಿ. ಪಾಟೀಲ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಗಾಣದ ಎಣ್ಣೆಯ ಮಹತ್ವ, ಉತ್ಪಾದನೆ ಪ್ರಕ್ರಿಯೆ, ಮಾರಾಟ ಮಾಹಿತಿ, ಪ್ರಾಜೆಕ್ಟ್​ ರಿಪೋರ್ಟ್​, ಬ್ಯಾಂಕ್​ ಸಾಲ ಕುರಿತು ಅಗತ್ಯ ಮಾಹಿತಿ ನೀಡಲಾಗುವುದು ಎಂದರು.
2015ರಿಂದ ಈವರೆಗೆ 9 ಬಾರಿ ಸುಮಾರು 300 ಜನರಿಗೆ ತರಬೇತಿ ನೀಡಲಾಗಿದ್ದು, ಅವರಲ್ಲಿ ಹಲವರು ಎಣ್ಣೆ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ವಾರ್ಡ್​ ಹಾಗೂ ಪ್ರತಿ ಗ್ರಾಮದಲ್ಲಿ ಒಂದು ಗಾಣ ಆರಂಭಗೊಂಡು ವಿಷಮುಕ್ತ ಎಣ್ಣೆ ಎಲ್ಲರಿಗೂ ಸಿಗಲಿ ಎಂಬುದೇ ನಮ್ಮ ಉದ್ದೇಶ. ರಿೈಂಡ್​ ಎಣ್ಣೆ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡುತ್ತಿದ್ದು, ಗಾಣದ ಎಣ್ಣೆ ಕುರಿತು ಸಂ ಅರಿವು ಮೂಡಿಸುತ್ತಿದೆ ಎಂದರು.
ಡಾ. ಶ್ರೀಶೈಲ ಬದಾಮಿ ಮಾತನಾಡಿ, ಜನರಿಗೆ ಮಿಲ್​ ಹಾಗೂ ಗಾಣದ ಎಣ್ಣೆ ವ್ಯತ್ಯಾಸ ತಿಳಿಸಬೇಕು. ತಿನ್ನುವ ಎಣ್ಣೆಯಲ್ಲಿ ಪೆಟ್ರೋಲಿಯಂ ತ್ಯಾಜ್ಯ ಮಿಶ್ರಣ ಮಾಡಲಾಗುತ್ತದೆ. ದೀರ್ ಕಾಲ ಇದೇ ಎಣ್ಣೆಯನ್ನು ಬಳಸಿದರೆ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ತರಬೇತಿಗೆ ಆಸಕ್ತಿ ಹೊಂದಿದವರು ಎಂ.ಡಿ. ಪಾಟೀಲ ಅವರನ್ನು ಸಂಪಕಿರ್ಸಬಹುದು ಎಂದರು.
ಶಿವಾನಂದ ಕುಂಬಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net