ತೈಲ, ಇಂಧನ ಬೆಲೆ ಏರಿಕೆಗೆ ಜೆಡಿಎಸ್ ಮುಖಂಡರ ಆಕ್ರೋಶ: ಕೂಡ್ಲಿಗಿಯಲ್ಲಿ ತಹಸೀಲ್ದಾರ್‌ಗೆ ಮನವಿ

Kudligi JDS Protest
ಕೂಡ್ಲಿಗಿಯಲ್ಲಿ ತಹಸೀಲ್ದಾರ್ ಜಗದೀಶ್‌ಗೆ ಜೆಡಿಎಸ್ ತಾಲೂಕು ಘಟಕದ ಮುಖಂಡರು ಗುರುವಾರ ಮನವಿ ಸಲ್ಲಿಸಿದರು.
Published on

ಕೂಡ್ಲಿಗಿ: ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಆಗ್ರಹಿಸಿ ಜೆಡಿಎಸ್ ತಾಲೂಕು ಘಟಕದ ಮುಖಂಡರು ಗುರುವಾರ ತಹಸೀಲ್ದಾರ್ ಜಗದೀಶ್‌ಗೆ ಮನವಿ ಸಲ್ಲಿಸಿದರು.

ದೇಶದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ್ದು, ವಿದ್ಯುತ್, ರಸಗೊಬ್ಬರ ಬೇಲೆ ಗಗನಕ್ಕೇರಿದೆ. ಇದರಿಂದ ರೈತರು, ಕಾರ್ಮಿಕರು, ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಇದರೊಂದಿಗೆ ಕರೊನಾ ಲಾಕ್‌ಡೌನ್‌ನಿಂದ ಬೀದಿಬದಿ ವ್ಯಾಪಾರಿಗಳು, ಅಸಂಘಟಿತ ಕಾರ್ಮಿಕರು ಬದುಕು ದುಸ್ತರವಾಗಿದ್ದು, ಅಗತ್ಯ ಪರಿಹಾರ ನೀಡಬೇಕು. ಬೆಲೆ ಏರಿಕೆ ತಡೆಯಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ. ಪಪಂ ಸದಸ್ಯರಾದ ಸಿರಿಬಿ ಮಂಜುನಾಥ, ಕೆ.ಈಶಪ್ಪ, ಮುಖಂಡರಾದ ರಾಘವೇಂದ್ರ, ವಿನೋದ್ ಕಲಾಲ್, ಮಾಳಿಗಿ ರಾಘವೇಂದ್ರ, ಸಿದ್ದಪ್ಪ ಯಾದವ್, ಗುಪ್ಪಾಲ್ ಅಜೇಯ, ನಜೀರ್ ಆಹಮದ್, ರಾಜು, ಚಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net