ಅಯೋ ಪ್ರಾಬ್ಲಂ ಕಣ್ರೀ.. ಗಣತಿದಾರರ ಅಲೆದಾಟ

Oh, the problem is obvious.. the wandering of the enumerators.
Published on

ರಬಕವಿ-&ಬನಹಟ್ಟಿ:ರಾಜ್ಯ ಸರ್ಕಾರದ ಬಹು ನಿರೀತ "ಜಾತಿ ಗಣತಿ' ಎಂದು ಕರೆಯುವ ಸಾಮಾಜಿಕ ಮತ್ತು ಶೈಣಿಕ ಸಮೀೆ ಮಂಗಳವಾರ ತಾಲೂಕಾದ್ಯಂತ ಪ್ರಾರಂಭವಾಗಿದ್ದು, ಗಣತಿದಾರರು ಮನೆ ಮೆನೆಗೆ ತೆರಳಿ ದತ್ತಾಂಶ ಸಂಗ್ರಹ ವೇಳೆ ಸರ್ವರ್​ ಸಮಸ್ಯೆಗೆ ಶಿಕಿಯರು ಸುಸ್ತಾದ ಪ್ರಸಂಗ ನಡೆಯಿತು.ಅಗತ್ಯ ದಾಖಲೆಗಳ ಸಂಗ್ರಹದೊಂದಿಗೆ ಮನೆಯವರನ್ನು ಸಂಪರ್ಕಿಸುತ್ತಿದ್ದಂತೆ ಮೊಬೈಲ್​ ಆಪ್​ನ ಸಂಪರ್ಕ ದೋಷ ಅಥವಾ ಸರ್ವರ್​ ಸಮಸ್ಯೆಯಿಂದಾಗಿ ಕುಳಿತಲ್ಲೇ ಕುಳಿತು ಸುಸ್ತಾದರು. ಜಾತಿ ಗಣತಿಗೆ ಬಳಸಲಾಗುವ ಮೊಬೈಲ್​ ಅಪ್ಲಿಕೇಶನ್​ ಡೇಟಾ ಅಪ್​ಲೋಡ್​ಗೆ ಪರದಾಡುವುದು ಮತ್ತು ತಾಂತ್ರಿಕ ದೋಷದಿಂದ ಗೊಂದಲಕ್ಕೆ ಕಾರಣವಾಯಿತು.

ತರಬೇತಿ ಕಿಟ್​ ಕೊರತೆ ಗಣತಿದಾರರಿಗೆ ಸಮರ್ಪಕ ತರಬೇತಿ ಸಿಕ್ಕಿಲ್ಲ ಮತ್ತು ಅವರಿಗೆ ಅಗತ್ಯವಿರುವ ಕಿಟ್​ಗಳು ಸಮಯಕ್ಕೆ ಸರಿಯಾಗಿ ಸಿಕ್ಕಿಲ್ಲವೆಂಬ ದೂರುಗಳು ಕೇಳಿ ಬಂದಿವೆ. ಕೆಲವು ಪ್ರದೇಶಗಳಲ್ಲಿ ಗಣತಿದಾರರಿಗೆ ಯಾವ ಪ್ರದೇಶದಲ್ಲಿ ಸಮೀೆ ನಡೆಸಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲದ ಕಾರಣ ಊರ ತುಂಬೆಲ್ಲಾ ಅಲೆದಾಡುವ ಸ್ಥಿತಿ ಸಾಮಾನ್ಯವಾಗಿತ್ತು.

ಪ್ರತಿ ಗಣತಿದಾರರಿಗೆ ನೂರರೊಳಗೆ ಮನೆಗಳ ಸಮೀೆ ಮಾಡಬೇಕು ಅಂತ ನಿಗದಿ ಪಡಿಸಲಾಗಿದೆ. ಆದರೇ ಕುಟುಂಬ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಮತ್ತೆ ಭೇಟಿ ನೀಡಬೇಕು ಎನ್ನುವ ನಿಯಮ ಸಮೀಕ್ಷೆ ವಿಳಂಬಕ್ಕೆ ಕಾರಣವಾಗಿದೆ. ಈ ನಡುವೆ ಮನೆಯಲ್ಲಿರುವ ಆಭರಣಗಳ ಬಗ್ಗೆ ಮಾಹಿತಿ ಕೇಳುವ ಪ್ರಶ್ನೆಗಳಿಗೆ ಸಾರ್ವಜನಿಕರಲ್ಲಿ ದಿಗಿಲು ಬಡೆದಿದೆ. ಒಟ್ಟಾರೆ ಸಮೀಕ್ಷೆಗೆ ಆರಂಭದಲ್ಲಿಯೇ ನೂರೆಂಟು ಸವಾಲ್​, ಸಂಕಷ್ಟ, ಸಮಸ್ಯೆ ಕಂಡು ಬಂದಿದ್ದು, ಅಧಿಕಾರಿಗಳು, ಸರ್ಕಾರ ಈ ನಿಟ್ಟಿನಲ್ಲಿ ಯಾವ ಪರಿಹಾರ ಕಂಡುಕೊಳ್ಳಲಿದೆ ಎನ್ನುವುದು ಕಾದು ನೋಡಬೇಕು.

ಬನಹಟ್ಟಿ ನಗರದಲ್ಲಿ ಜಾತಿ ಗಣತಿ ಸಮೀೆ ಸಂದರ್ಭದಲ್ಲಿ ಸರ್ವರ್​ ಸಮಸ್ಯೆ ಎದುರಿಸುತ್ತಿರುವ ಗಣತಿದಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net