ಕಳಚೆ ರಸ್ತೆ ಕುಸಿತ ಸ್ಥಳಕ್ಕೆ ಅಧಿಕಾರಿಗಳು ಭೇಟಿ

27 ylp 04 (kalache)
Published on

ಯಲ್ಲಾಪುರ: ತಾಲೂಕಿನ ಕಳಚೆಯಲ್ಲಿ ಹೊಸಕುಂಬ್ರಿ- ಶಂಬಡೆಮನೆಕೇರಿ ರಸ್ತೆ ಕುಸಿತವಾದ ಸ್ಥಳಕ್ಕೆ ಜಿ.ಪಂ ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಎಇಇ ಅಶೋಕ ಬಂಟ, ಎಇ ಮೀನಾಕ್ಷಿ ಇತರರು ಭೇಟಿ ನೀಡಿ, ಕುಸಿಯುತ್ತಿರುವ ರಸ್ತೆಯಲ್ಲಿ ಸಂಚರಿಸುವ ಅಪಾಯದ ಕುರಿತು ಜಾಗೃತಿ ಫಲಕ ಅಳವಡಿಸುವಂತೆ ಸ್ಥಳೀಯ ವಜ್ರಳ್ಳಿ ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸದ್ಯ ತಾತ್ಕಾಲಿಕ ಓಡಾಟಕ್ಕೆ ಗ್ರಾಮಸ್ಥರೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಮಳೆ ಜೋರಾದಲ್ಲಿ ರಸ್ತೆ ಇನ್ನಷ್ಟು ಕುಸಿಯುವ ಅಪಾಯವಿರುವುದರಿಂದ, ಜಾಗ್ರತೆ ವಹಿಸಲು ಗ್ರಾಮಸ್ಥರಲ್ಲಿ ಅಧಿಕಾರಿಗಳು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net