

ಸೋಮವಾರಪೇಟೆ: ಭಾನುವಾರ ರಾತ್ರಿ ಸುರಿದ ಗಾಳಿ-ಮಳೆಯಿಂದ ತಾಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳು ಭೇಟಿ ನೀಡಿ ಮಾಹಿತಿ ಪಡೆದರು.
ಸಮೀಪದ ನೇರುಗಳಲೆ ಗ್ರಾ.ಪಂ ವ್ಯಾಪ್ತಿಯ ತಣ್ಣೀರುಹಳ್ಳ ಗ್ರಾಮದ ಲಕ್ಷ್ಮೀ ಅವರ ವಾಸದ ಮನೆ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಬೆಟ್ಟ ಗ್ರಾಮದ ಪ್ರಮೀಳಾ ಅವರ ಮನೆಯ ಸೋರುತ್ತಿದ್ದು, ತಾತ್ಕಾಲಿಕವಾಗಿ ಪಂಚಾಯಿತಿ ವತಿಯಿಂದ ಟಾರ್ಪಲನ್ನು ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ನತೀಶ್ ಮಂದಣ್ಣ ವಿತರಿಸಿದರು.
ಬೆಟ್ಟದಳ್ಳಿ ಗ್ರಾ ಪಂ. ವ್ಯಾಪ್ತಿಯ ಬೇಕನಳ್ಳಿ ಗ್ರಾಮದ ಮುತ್ತಣ್ಣ ಅವರ ಮನೆಯ ಗೋಡೆ ಕುಸಿದಿರುವ ಪರಣಾಮ ಪಿಡಿಒ ರವಿ ಅವರು ಟಾರ್ಪಲ್ ವಿತರಿಸಿದರು.