ಮಳೆಯಿಂದಾಗಿ ಸುರಂಗ ನಾಲೆ ಕುಸಿತ: ಹುಲಿಕೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಪರಿಶೀಲನೆ

Officials Visit Hulikere village mandya
Published on

ಮಂಡ್ಯ: ಜೋರು ಮಳೆಯಿಂದಾಗಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಸುರಂಗ ನಾಲೆ ಭೂಕುಸಿತವಾಗಿದ್ದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಮಂಗಳವಾರ ಮುಂಜಾನೆ 2.8 ಕಿ.ಮೀ ಉದ್ದದ ಸುರಂಗ ನಾಲೆಯ 2.5 ಕಿ.ಮೀ ಸಮೀಪ ಏರ್‌ವೆಂಟ್ ಸ್ಥಳದಲ್ಲಿ ಭೂ ಕುಸಿತವಾಗಿತ್ತು. ಮುನ್ನೆಚ್ಚೆರಿಕಾ ಕ್ರಮವಾಗಿ ತಕ್ಷಣವೇ ನಾಲೆಯಲ್ಲಿ ನೀರು ನಿಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ನಿಗಮದ ಎಂಡಿ ಮಹೇಶ್ ಭೇಟಿ ನೀಡಿದ್ದರು. ಸುರಂಗ ನಾಲೆಗೆ ಇಳಿದು, ಒಳಗೆ ಹೋಗಲು ಅಧಿಕಾರಿಗಳು ಪ್ರಯತ್ನಿಸಿದರು.

ಆದರೆ, ನಾಲೆಯಲ್ಲಿ ಇನ್ನೂ ಮಂಡಿಯುದ್ದ ನೀರು ಹರಿಯುತ್ತಿದ್ದ ಹಿನ್ನಲೆಯಲ್ಲಿ ಮುಂದೆ ಹೋಗಲಾಗದ ಅಧಿಕಾರಿಗಳ ತಂಡ ಹಿಂದಿರುಗಿತು. ಈ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಪೂರಕ ಮಾಹಿತಿ ಪಡೆದುಕೊಂಡರು. ಅಂತಿಮವಾಗಿ ನ.9ರಂದು ತಾಂತ್ರಿಕ ತಜ್ಞರ ತಂಡವನ್ನು ಸ್ಥಳಕ್ಕೆ ಕಳುಹಿಸಿ, ಅವರಿಂದ ಪರಿಶೀಲನಾ ವರದಿ ಪಡೆದು ಕ್ರಮ ವಹಿಸುವುದಾಗಿ ಮಹೇಶ್ ಭರವಸೆ ನೀಡಿದರು.

ನಿಗಮದ ಅಧೀಕ್ಷಕ ಇಂಜಿನಿಯರ್ ಕೆ.ರಘುರಾಮನ್, ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ವಿ.ಜಯಂತ್, ನಂಜುಂಡೇಗೌಡ, ಎಇಇ ಜಯರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net