ಫರ್ಟಿಲೈಸರ್ ಮಳಿಗೆಗಳಿಗೆ ಅಧಿಕಾರಿಗಳ ಭೇಟಿ

mudgal fertilizer
ಮುದಗಲ್ ಖಾಸಗಿ ಫರ್ಟಿಲೈಸರ್ ಮಳಿಗೆಗೆ ಪಿಎಸ್‌ಐ ವೆಂಕಟೇಶ ಮಾಡಗೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮಹಾಂತಯ್ಯ ನೇತೃತ್ವದಲ್ಲಿ ಶುಕ್ರವಾರ ಭೇಟಿ ನೀಡಿ ದಾಸ್ತಾನು ಪರಿಶೀಲಿಸಲಾಯಿತು.
Published on

ಮುದಗಲ್: ಪಟ್ಟಣದ ಕೃಷಿ ಆಗ್ರೋ ಕೇಂದ್ರಗಳಿಗೆ ಪಿಎಸ್‌ಐ, ಕೃಷಿ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ರಾಸಾಯನಿಕ ಗೊಬ್ಬರ ಹಾಗೂ ಬೀಜಗಳ ದಾಸ್ತಾನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ಕೃಷಿ ಆಗ್ರೋ ಕೇಂದ್ರಗಳು ಅಧಿಕ ದರದಲ್ಲಿ ರಸಗೊಬ್ಬರ ಮಾರಾಟ, ಕೃತಕ ಅಭಾವ ಸೃಷ್ಟಿಸುವುದು, ನಕಲಿ ಬೀಜ, ರಾಸಾಯನಿಕ ಗೊಬ್ಬರ ಮಾರಾಟ ಮಾಡುವುದನ್ನು ತಡೆಗಟ್ಟಲು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಾಲೂಕು ಕೃಷಿ ಅಧಿಕಾರಿಗಳ ನೇತೃತ್ವದ ತಂಡ ಖಾಸಗಿ ಫರ್ಟಿಲೈಸರ್ ಮಳಿಗೆಗಳಿಗೆ ಭೇಟಿ ನೀಡಿ ದಾಸ್ತಾನು ಕೊಠಡಿಗಳು, ಕಡತಗಳ ಪರಿಶೀಲನೆ ನಡೆಸಿತು.

ರೈತರಿಗೆ ಹೆಚ್ಚಿನ ದರದಲ್ಲಿ ರಸಗೊಬ್ಬರ ಹಾಗೂ ನಕಲಿ ಉತ್ಪನ್ನಗಳ ಮಾರಾಟ ಮಾಡಿರುವುದು ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫರ್ಟಿಲೈಸರ್‌ಗಳ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net