

ವಿಜಯಪುರ: ಪಟ್ಟಣದಲ್ಲಿ ಗಣಪತಿ ಮೂರ್ತಿಗಳನ್ನು ತಯಾರಿಸುವ ಘಟಕಗಳಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನು ಹೊರತುಪಡಿಸಿ, ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡಲು ಅವಕಾಶವಿಲ್ಲ. 5 ಅಡಿಗೂ ಎತ್ತರದ ಮೂರ್ತಿಗಳನ್ನು ತಯಾರಿಸುವುದಕ್ಕೂ ಅವಕಾಶವಿಲ್ಲ. ಕೆಲವೆಡೆ ಗುಪ್ತವಾಗಿ ಪಿಒಪಿ ಗಣಪತಿ ಮೂರ್ತಿ ತಯಾರು ಮಾಡುತ್ತಿರುವ ಕುರಿತು ಮಾಹಿತಿ ಸಿಕ್ಕಿದ್ದು, ದಾಳಿ ಮಾಡಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇಂಜಿನಿಯರ್ ಕುಮಾರಸ್ವಾಮಿ ಹೇಳಿದರು.
ಮಣ್ಣಿನ ಗಣಪತಿ ಮೂರ್ತಿಗಳಿಗೆ ಪರಿಸರಕ್ಕೆ ಹಾನಿಕಾರಕವಲ್ಲದ ಬಣ್ಣಗಳನ್ನು ಹಚ್ಚಬೇಕು, ಮಾರಕವಾಗುವಂತಹ ಬಣ್ಣಗಳನ್ನು ಹಚ್ಚುವುದರಿಂದ ವಿಸರ್ಜನೆಯ ನಂತರ ನೀರಿನಲ್ಲಿ ಕರಗುವ ಬಣ್ಣವು ಪ್ರಾಣಿಪಕ್ಷಿಗಳಿಗೆ ಮಾರಕವಾಗಲಿದೆ ಎಂದರು.