ಮಂಗಳಾದೇವಿ ದೇವಸ್ಥಾನದಲ್ಲಿ ಭರ್ಜರಿ ಮದುವೆಗೆ ಅಧಿಕಾರಿಗಳ ದಾಳಿ

WhatsApp Image 2021-06-20 at 1.16.23 PM
Published on

ಮಂಗಳೂರು: ನಗರ ಮಧ್ಯೆ ಇರುವ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಲಾಕ್‌ಡೌನ್‌ ನಿಯಮಾವಳಿ ಉಲ್ಲಂಘಿಸಿ‌ ಹೆಚ್ಚು ಸಂಖ್ಯೆಯಲ್ಲಿ ಜನಸೇರಿಸಿ ಮದುವೆ ಏರ್ಪಡಿಸಿದ್ದು, ಅಲ್ಲಿಗೆ ಜಿಲ್ಲಾಧಿಕಾರಿ ಆದೇಶದಂತೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಹಾಯಕ ಆಯುಕ್ತರು ದಾಳಿ ಕೈಗೊಂಡಿದ್ದಾರೆ.
ಪಾಲಿಕೆಯ ನಾಮನಿರ್ದೇಶಕ ಸದಸ್ಯರೊಬ್ಬರ ಪುತ್ರಿಯ ಮದುವೆ ಸೇರಿದಂತೆ ಒಟ್ಟು ೪ ಜೋಡಿ ಮದುವೆ ಮಂಗಳಾದೇವಿ ದೇವಸ್ಥಾನದ ಆವರಣದಲ್ಲಿರುವ ಹಾಲ್‌ನಲ್ಲಿ ಏರ್ಪಡಿಸಲಾಗಿತ್ತು. ವಾದ್ಯ ವಾಲಗದೊಂದಿಗೆ ದಿಬ್ಬಣ, ಹೆಚ್ಚಿನ ಸಂಖ್ಯೆಯಲ್ಲಿ ಕಾರುಗಳಿದ್ದುದನ್ನು ಗಮನಿಸಿ ಯಾರೋ ಜಿಲ್ಲಾಧಿಕಾರಿಯವರಿಗೆ ವಿಚಾರ ತಿಳಿಸಿದ್ದರು.
ಸದ್ಯ ಯಾವುದೇ ಹಾಲ್‌ನಲ್ಲಿ, ದೇವಸ್ಥಾನದಲ್ಲಿ ಮದುವೆ ನಡೆಸುವಂತಿಲ್ಲ, ಸರಳವಾಗಿ ೪೦ ಜನ ಮೀರದಂತೆ ಮನೆಯಲ್ಲೇ ನಡೆಸಬೇಕು ಎನ್ನುವ ನಿಯಮಾವಳಿಗಳಿದ್ದರೂ ಅದನ್ನು ಗಾಳಿಗೆ ತೂರಿ ಈ ಮದುವೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net