ಡೆಂಘೆ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ

13 HBD 1
ಹುಮನಾಬಾದ್ ಶಾಸಕರ ಆಡಳಿತ ಕಛೇರಿಯಲ್ಲಿ ಶುಕ್ರವಾರ ಡೆಂಘೆ ನಿಯಂತ್ರಣ ಕುರಿತು ಅಧಿಕಾರಿಗಳ ಜತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸಭೆ ನಡೆಸಿದರು. ಅಂಜುಂ ತಬಸ್ಸುಮ್, ದೀಪಿಕಾ ನಾಯ್ಕರ, ರಮೇಶಕುಮಾರ, ಅಕ್ರಮ್ ಪಾಷಾ, ಅನೀಲಕುಮಾರ ಕುಲಕರ್ಣಿ, ಬಾಬಾ ಹಿಸಾಮೋದ್ದಿನ್, ಅಶೋಕ ಚಿನ್ನಕೋಟೆ ಇದ್ದರು.
Published on

ಹುಮನಾಬಾದ್: ಕ್ಷೇತ್ರದಲ್ಲಿ ಡೆಂಘೆ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವಂತೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಪಟ್ಟಣದ ಶಾಸಕರ ಆಡಳಿತ ಕಚೇರಿಯಲ್ಲಿ ಶುಕ್ರವಾರ ಸಂಜೆ ಹುಮನಾಬಾದ್, ಚಿಟಗುಪ್ಪ ಮತ್ತು ಬಸವಕಲ್ಯಾಣ ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಪುರಸಭೆ ಇಲಾಖೆ ಅಧಿಕಾರಿಗಳೊಂದಿಗೆ ಡೆಂಘೆ ನಿಯಂತ್ರಣ ಕುರಿತು ಸಭೆ ನಡೆಸಿದ ಅವರು, ಡೆಂಘೆ ತಡೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸರ್ವಸನ್ನದ್ಧರಾಗಿರಬೇಕು. ತಾಲೂಕಿನ ಎಲ್ಲ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಉಪಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದರು.

ಡೆಂಘೆ ಜ್ವರದ ಲಕ್ಷಣ, ತಪಾಸಣೆ, ಚಿಕಿತ್ಸೆ ಅಗತ್ಯದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಿದರೆ ರೋಗ ಬಾರದಂತೆ ತಡೆಯಬಹುದು. ಆಶಾ ಕಾರ್ಯಕರ್ತೆಯರು ಗ್ರಾಮೀಣ ಭಾಗದ ಮನೆ-ಮನೆಗೆ ಭೇಟಿ ನೀಡಿ ತಿಳಿವಳಿಕೆ ಮೂಡಿಸಬೇಕು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಪಂ ಇಒಗಳಾದ ದೀಪಿಕಾ ನಾಯ್ಕರ, ರಮೇಶಕುಮಾರ, ಅಕ್ರಂ ಪಾಷಾ, ಪುರಸಭೆ ಮುಖ್ಯಾಧಿಕಾರಿಗಳಾದ ಅನೀಲಕುಮಾರ ಕುಲಕರ್ಣಿ, ಬಾಬಾ ಹಿಸಾಮೋದ್ದಿನ್, ಅಶೋಕ ಚಿನ್ನಕೋಟೆ, ವೈದ್ಯಾಧಿಕಾರಿಗಳಾದ ಡಾ.ವಿಶ್ವಾ ಸೈನಿರ್, ಡಾ.ವಿಜಯಭಾಸ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net