ಹಗರಣದಲ್ಲಿ ಅಧಿಕಾರಿಗಳು ಶಾಮೀಲು

dharani
ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ನಡೆಯುತ್ತಿರುವ ಅಹೋರಾತ್ರಿ ಧರಣಿಗೆ ಬಸ್ರೂರು ಮತ್ತು ಪೆರ್ಡೂರು ವಲಯದಿಂದ ಬೆಂಬಲ ಸೂಚಿಸಿ ಕೆ.ಪ್ರತಾಪಚಂದ್ರ ಶೆಟ್ಟಿ ಮಾತನಾಡಿದರು.
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಗುಜರಿ ಮಾರಾಟದಲ್ಲಿ ಹಿಂದಿನ ಆಡಳಿತದೊಂದಿಗೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದು, ಈ ಕಾರಣದಿಂದ ತನಿಖೆ ವಿಳಂಬವಾಗುತ್ತಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಕೆ.ಪ್ರತಾಪ್‌ಚಂದ್ರ ಶೆಟ್ಟಿ ಆರೋಪಿಸಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿ ಸತತ 15 ದಿನದಿಂದ ನಡೆಯುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹ ಸಂದರ್ಭ ಶನಿವಾರ ಬಸ್ರೂರು ಮತ್ತು ಪೆರ್ಡೂರು ವಲಯದಿಂದ ನಡೆದ ಸತ್ಯಾಗ್ರಹದಲ್ಲಿ ಮಾತನಾಡಿದರು.

ಹಲವು ಭಾಗದ ಸಹಕಾರಿ ಮತ್ತು ರೈತರು, ಜನಪ್ರತಿನಿಧಿಗಳಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಅಶೋಕ ಕುಮಾರ್ ಶೆಟ್ಟಿ ಕರ್ಜೆ, ದೇವಾನಂದ ಶೆಟ್ಟಿ ಹಳ್ನಾಡ, ನಿತ್ಯಾನಂದ ಶೆಟ್ಟಿ ಹಾರಾಡಿ, ಭುಜಂಗ ಶೆಟ್ಟಿ ಬ್ರಹ್ಮಾವರ, ಶಾಂತಾರಾಮ ಸೂಡ, ಪ್ರಸಾದ್‌ರಾಜ್ ಕಾಂಚನ್, ದಿನಕರ ಹೇರೂರು, ಅಶೋಕ್ ಕುಮಾರ್ ಶೆಟ್ಟಿ ಹಿರಿಯಡ್ಕ, ಮಾಜಿ ಶಾಸಕ ಬಸವರಾಜ್, ಸುದೇಶ್ ಹೆಗ್ಡೆ ಬ್ರಹ್ಮಾವರ ಸಹಿತ ನೂರಾರು ಮಂದಿ ಭಾಗವಹಿಸಿದ್ದರು.

ಇದು ರೈತರ ನ್ಯಾಯಾಗ್ರಹದ ಬೇಡಿಕೆ ಮತ್ತು ಹೋರಾಟವಾಗಿದೆ. ಸರ್ಕಾರ, ಆಡಳಿತ ಯಂತ್ರ ಜನಪ್ರತಿನಿಧಿಗಳ ಜತೆಗೆ ಅಧಿಕಾರಿಗಳು ಹಗರಣದಲ್ಲಿ ಕೈಜೋಡಿಸಿದಾಗ ಮಾತ್ರ ತನಿಖೆ ವಿಳಂಬಗೊಳ್ಳಲು ಸಾಧ್ಯ. ಇಲ್ಲಿ ಅಧಿಕಾರಿಗಳ ಪಾತ್ರ ಬಹುದೊಡ್ಡದಾಗಿದೆ. ಕೆ.ಪ್ರತಾಪ್‌ಚಂದ್ರಶೆಟ್ಟಿ, ಅಧ್ಯಕ್ಷ, ಉಡುಪಿ ಜಿಲ್ಲಾ ರೈತ ಸಂಘ https://www.vijayavani.net/provide-a-permanent-solution-to-the-salt-water-problem https://www.vijayavani.net/shivaprasad-available-to-customers-from-today

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net