ಅಧಿಕಾರಿಗಳಿಂದ ಉಚ್ಚಿಲ ಅಪಘಾತ ಸ್ಥಳ ವೀಕ್ಷಣೆ

rto
Published on

ಪಡುಬಿದ್ರಿ: ನಿರಂತರ ಅಪಘಾತ ಸಂಭವಿಸುವ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪ್ರದೇಶಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿ, ಕಾಪು ವೃತ್ತನಿರೀಕ್ಷಕಿ ಜಯಶ್ರೀ ಮಾನೆ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮನೋಜ್, ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ, ಯುಟಿಸಿಎಲ್ ಟೋಲ್ ಸಿಬ್ಬಂದಿ ಅಜಯ್ ಮತ್ತು ಶೈಲೇಶ್ ಶೆಟ್ಟಿ ಶನಿವಾರ ಭೇಟಿ ನೀಡಿದರು.

ಉಚ್ಚಿಲ ಮಸೀದಿ ಬಳಿ ಇರುವ ಯೂಟರ್ನ್ ರದ್ದು ಮಾಡಿ ಮುಂದೆ ನಿರ್ಮಿಸಬೇಕು. ಸರ್ವೀಸ್ ರಸ್ತೆಯಲ್ಲಿ ಸಾಗುವವರು ಉಚ್ಚಿಲ ಜಂಕ್ಷನ್‌ಗೆ ಬರಲು ವಿರುದ್ಧ ಪಥದಲ್ಲಿ ಬರಬೇಕಿದೆ. ಇದರಿಂದ ಅಪಘಾತ ಸಂಭವಿಸುತ್ತಿವೆ. ಇದನ್ನು ಶೀಘ್ರ ಸರಿಪಡಿಸಬೇಕೆಂದು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಮತ್ತು ಕಾಪು ವೃತ್ತನಿರೀಕ್ಷಕಿ ಜಯಶ್ರೀ ಮಾನೆ ಆರ್‌ಟಿಒ ಅಧಿಕಾರಿಗೆ ಮನವರಿಕೆ ಮಾಡಿದರು.

ಉಚ್ಚಿಲ ಪೇಟೆಯಲ್ಲಿಯೂ ತಿರುವು ಅಗತ್ಯ ಇದ್ದು, ಅದನ್ನೂ ಪರಿಶೀಲಿಸಬೇಕೆಂದು ಆರ್‌ಟಿಒ ಗಮನಕ್ಕೆ ತರಲಾಯಿತು. ಸರ್ವಿಸ್ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ನಿರ್ಮಿಸಬೇಕು. ಹೆದ್ದಾರಿಯಲ್ಲಿ ಬ್ಲಿಂಕರ್ ಅಳವಡಿಸಿದರೆ, ರಾತ್ರಿ ಸಂಚಾರ ಸುಗಮ ಆಗಲಿದೆ. ಈಗಾಗಲೇ ಮೆಸ್ಕಾಂ ಅಧಿಕಾರಿಯವರೊಂದಿಗೆ ಮಾತುಕತೆ ನಡೆಸಲಾಗಿದ್ದು, ತುರ್ತಾಗಿ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಭರವಸೆ ನೀಡಿದ್ದಾರೆ ಎಂದು ಠಾಣಾಧಿಕಾರಿ ಟೋಲ್ ಅಧಿಕಾರಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net