ಅಧಿಕಾರಿಗಳು ಅಕ್ರಮ ನೀರಾವರಿ ತಡೆಯಲಿ

16 MNV 03
ಮಾನ್ವಿ ತಾಪಂ ಆವರಣದಲ್ಲಿ ಕೊನೆಯ ಭಾಗದ ರೈತರು ಪ್ರತಿಭಟನೆ ನಡೆಸಿದರು. ದಸಂಸ ಸಂಚಾಲಕ ಬಸವರಾಜ ನಕ್ಕುಂದಿ, ವಿರುಪಣ್ಣ ಛಲವಾದಿ, ಶಿವಪ್ಪ ನಾಡಗೌಡ ಹುಲಿಗೆಪ್ಪ ನಕ್ಕುಂದಿ, ಶಿವಗೇನಿ ಅಮರಾವತಿ ಇನ್ನಿತರರು ಇದ್ದರು.
Published on

ಮಾನ್ವಿ: ತಾಲೂಕಿನ ನಕ್ಕುಂದಿ ಗ್ರಾಮದ ಉಪಕಾಲುವೆಗಳಲ್ಲಿ ಅಕ್ರಮವಾಗಿ ಪೈಪ್‌ಗಳನ್ನು ಹಾಕಿಕೊಂಡು ರಾತ್ರೋರಾತ್ರಿ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದು ಅಕ್ರಮ ನೀರಾವರಿ ತಡೆಗಟ್ಟಬೇಕು ಎಂದು ದಸಂಸ ಸಂಚಾಲಕ ಬಸವರಾಜ ನಕ್ಕುಂದಿ ಒತ್ತಾಯಿಸಿದರು.

ಪಟ್ಟಣದ ತಾಪಂ ಆವರಣದಲ್ಲಿ ಬುಧವಾರ ರೈತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿ, ನಕ್ಕುಂದಿ ಗ್ರಾಮದ ಉಪಕಾಲುವೆ 76/3/1 ಮೇಲ್ಭಾಗದ ರೈತರು ರಾತ್ರೋರಾತ್ರಿ ಅಕ್ರಮವಾಗಿ ಒಟ್ಟು 50 ಎಕರೆ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ.

ಕೊನೆಯ ಭಾಗದ ರೈತರ ಜಮೀನುಗಳಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ, ಜೋಳಕ್ಕೆ ನೀರು ಹಾಯಿಸಲು ಬಹಳ ತೊಂದರೆಯಾಗುತ್ತಿದ್ದು ಬೆಳೆಗಳು ಬಾಡಿ ಹೋಗುತ್ತಿವೆ. ಅಕ್ರಮ ನೀರಾವರಿಗೆ ಕುಮ್ಮಕ್ಕು ನೀಡುತ್ತಿರುವ ನೀರಾವರಿ ಅಧಿಕಾರಿ ಎಇಇ ಈಶ್ವರ, ಜೆಇ ರಮೇಶ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ಕೆಳ ಭಾಗದ ರೈತರ ಜಮೀನುಗಳಿಗೆ ನೀರು ಬಿಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net