ಅಕ್ರಮ ಆಸ್ಪತ್ರೆ ಮೇಲೆ ಅಧಿಕಾರಿಗಳ ದಾಳಿ

IND 15- 4,,
ಇಂಡಿ ಪಟ್ಟಣದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಆಸ್ಪತ್ರೆ ನಡೆಸುತ್ತಿದ್ದ ಬಾಬರ್ ಆಸ್ಪತ್ರೆ ಮೇಲೆ ತಾಲೂಕುಮಟ್ಟದ ಅಧಿಕಾರಿಗಳು ದಾಳಿ ನಡೆಸಿ ಆಸ್ಪತ್ರೆ ಮುಚ್ಚಿಸಿದರು. ತಹಸೀಲ್ದಾರ್ ನಾಗಯ್ಯ ಹಿರೇಮಠ, ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ, ಕಂದಾಯ ನಿರೀಕ್ಷಕ ಬಸವರಾಜ ರಾವೂರ್ ಇತರರಿದ್ದರು.
Published on

ಇಂಡಿ: ಪಟ್ಟಣದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಬಾಬರ್ ಆಸ್ಪತ್ರೆ ಮೇಲೆ ಗುರುವಾರ ತಹಸೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

ಅಂಬೇಡ್ಕರ್ ವೃತ್ತದ ಬಳಿಯ ಈ ಆಸ್ಪತ್ರೆಗೆ ತೆರಳಿದ ತಹಸೀಲ್ದಾರ್ ನಾಗಯ್ಯ ಹಿರೇಮಠ, ಆರೋಗ್ಯಾಧಿಕಾರಿ ಅರ್ಚನಾ ಕುಲಕರ್ಣಿ ಅವರು ಆಸ್ಪತ್ರೆಗೆ ಅನುಮತಿ ನೀಡಿದ ಕುರಿತ ಸಂಬಂಧಿಸಿದವರಿಗೆ ದಾಖಲಾತಿ ಕೇಳಿದ್ದಾರೆ. ಈ ವೇಳೆ ಕೆಪಿಎಂಈ ಮೂಲಕ ಅನುಮತಿ ಪಡೆಯದಿರುವುದು ಹಾಗೂ ಸಂಬಂಧಿಸಿದ ಕೋರ್ಸ್ ಸಹ ಮುಗಿಸದಿರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆ ಬಂದ್ ಮಾಡಬೇಕು. ಇಲ್ಲವಾದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿ ಆಸ್ಪತ್ರೆಗೆ ಬೀಗ ಹಾಕಿಸಿದ್ದಾರೆ. ದಾಳಿ ವೇಳೆ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದರು.

ಕಂದಾಯ ನಿರೀಕ್ಷಕ ಬಸವರಾಜ ರಾವೂರ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net