

ಕಿರುವಾರ ಎಸ್. ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿನ ಸಾರಿಗೆ ಕಚೇರಿಗಳಲ್ಲಿ ಅಧಿಕಾರಿ, ಸಿಬ್ಬಂದಿ ಯಾರು ಎಂದು ಗುರುತಿಸುವುದೇ ದೊಡ್ಡ ಸವಾಲಾಗಿದೆ. ಹೌದು. ಕೋಲಾರ ಆರ್ಟಿಒ ಮತ್ತು ಕೆಜಿಎ್ ಎಆರ್ಟಿಒ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ಅಧಿಕಾರಕ್ಕಿಂತ ಮಧ್ಯವರ್ತಿಗಳ ದರ್ಬಾರ್ ಜೋರಾಗಿದ್ದು, ಅಧಿಕಾರಿ, ಸಿಬ್ಬಂದಿ ಆಟಕ್ಕುಂಟು. ಲೆಕ್ಕಕ್ಕಿಲ್ಲ ಎಂಬತಾಗಿದೆ.
ಸಾರ್ವಜನಿಕರು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಲು ಕೋಲಾರ ಆರ್ಟಿಒ ಹಾಗೂ ಕೆಜಿಎ್ನ ಎಆರ್ಟಿಒ ಕಚೇರಿಯಲ್ಲಿ ಸಮರ್ಪಕ ವ್ಯವಸ್ಥೆಯಿಲ್ಲ. ಇಲ್ಲಿ ಎಲ್ಲವೂ ಮಧ್ಯವರ್ತಿಗಳಿಂದಲೇ ನಡೆಯುತ್ತಿದೆ. ಸೌಲಭ್ಯ ಕೋರಿ ಯಾರಾದರೂ ಅರ್ಜಿ ಸಲ್ಲಿಸಿದರೆ ವರ್ಷ ಕಳೆದರೂ ಸೇವೆ ದೊರೆಯುವುದಿಲ್ಲ. ಇಲಾಖೆಯ ನಿಯಮಗಳು ಯಾವುದೂ ಪಾಲನೆ ಆಗುವುದಿಲ್ಲ. ಇಲ್ಲಿ ವಾಹನ ಚಾಲನಾ ತರಬೇತಿ ಕೇಂದ್ರ, ಡೆವಿಂಗ್ ಶಾಲೆಗಳ ಮಾಲೀಕರು ಹೇಳಿದ ಹಾಗೆ ನಡೆಯುತ್ತದೆ ಎಂಬುದು ಸಾರ್ವಜನಿಕರ ಆರೋಪ.
ಡೆವಿಂಗ್ ಬರದಿದ್ದರೂ ಪರವಾನಗಿ: ಹೊಸದಾಗಿ ಚಾಲನಾ ಪರವಾನಗಿ ಪಡೆದುಕೊಳ್ಳಲು ಬರುವವರು ಕಡ್ಡಾಯವಾಗಿ ಟೆಸ್ಟ್ ಡೆವ್ ಮಾಡಬೇಕು. ಆದರೆ ಇಲ್ಲಿನ ಪದ್ಧತಿಯೇ ಬೇರೆ. ಪರವಾನಗಿ ಬೇಕಾಗಿರುವ ವ್ಯಕ್ತಿಯ ಪಕ್ಕದಲ್ಲಿ ತರಬೇತುದಾರ ಕುಳಿತುಕೊಳ್ಳುತ್ತಾನೆ, ಆತ ಚಾಲನೆ ಮಾಡುತ್ತಿರುತ್ತಾನೆ. ಆದರೆ ಚಾಲಕ ಮಾತ್ರ ಸುಮ್ಮನೆ ಸ್ಟೇರಿಂಗ್ ಹಿಡಿದುಕೊಂಡಿರಬೇಕು. ಒಂದು ವೇಳೆ ಡಿಎಲ್ ಪಡೆದುಕೊಳ್ಳುವವನಿಗೆ ವಾಹನ ಚಾಲನೆ ಮಾಡುವುದು ಬಾರದಿದ್ದರೂ ಅಧಿಕಾರಿಗಳು ಲೈಸನ್ಸ್ ವಿತರಣೆ ಮಾಡುತ್ತಾರೆ. ಇದೆಲ್ಲ ಆಗುವುದು ವಾಹನ ಚಾಲನ ತರಬೇತಿದಾರರನ ಮಧ್ಯಸ್ಥಿಕೆಯಲ್ಲಿ. ಇದಕ್ಕೆ ಬ್ರೇಕ್ ಇನ್ಪೆಕ್ಟರ್ ಬೆಂಬಲವೂ ಇದೆ ಎನ್ನಲಾಗಿದೆ.
ಪರಿಶೀಲಿಸದೆ ಪರ್ಮಿಟ್: ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ಲಾರಿ, ಟೆಂಪೋ, ಇತರ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಅವುಗಳಿಗೆ ಪರ್ಮಿಟ್ ನೀಡಬೇಕಾದರೆ ಸಾವಿರಾರು ರೂ. ಪಾವತಿ ಮಾಡಬೇಕು. ಇಲ್ಲದಿದ್ದರೆ ಪರ್ಮಿಟ್ ಸಿಗುವುದಿಲ್ಲ. ಇದೆಲ್ಲವನ್ನು ನೋಡಿಕೊಳ್ಳಲು ಅಧಿಕಾರಿಗಳೇ ಖಾಸಗಿ ದಲ್ಲಾಳಿಗಳನ್ನು ನೇಮಕ ಮಾಡಿಕೊಂಡಿದ್ದಾರೆ. ವಾಹನಗಳನ್ನು ಪರಿಶೀಲನೆಗೆ ಒಳಪಡಿಸಿ ವಾಹನದ ತೂಕ, ಇಂಜಿನ್ ಕಾರ್ಯ ವಿಧಾನ, ವಿಮೆ, ಎ್ಸಿ ಕಾಲಾವಧಿ ಇತ್ಯಾದಿ ಅಂಶ ವರದಿ ಮಾಡಬೇಕು. ಆದರೆ, ಇದ್ಯಾವುದನ್ನು ಗಮನಿಸದೆ ಮಧ್ಯವರ್ತಿಗಳ ಮಾಹಿತಿ ಮೇರೆಗೆ ಪ್ರಮಾಣ ಪತ್ರ ನೀಡಲಾಗುತ್ತದೆ, ಪರ್ಮಿಟ್ಗೆ ಅನುಮತಿ ಕೊಡಲಾಗುತ್ತಿದೆ.
ಮಧ್ಯವರ್ತಿಗಳ ಕೈಯಲ್ಲಿ ತಂತ್ರಾಂಶ: ಆರ್ಟಿಒ ಇಲಾಖೆ ಸಾರ್ವಜನಿಕ ಸೇವೆಯನ್ನು ಸರಳವಾಗಿಸುವ ನಿಟ್ಟಿನಲ್ಲಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಗೆ ಸಾರಥಿ, ವಾಹನ್ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಈ ಮೂಲಕ ಸಾರ್ವಜನಿಕರು ನೇರವಾಗಿ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಿ, ಎಲ್ಎಲ್ಆರ್, ಡಿಎಲ್ ಮತ್ತಿತರ ಸೇವೆ ಪಡೆಯಬಹುದಾಗಿದೆ. ಆದರೆ, ಇಲ್ಲಿ ಎಲ್ಲವೂ ಮಧ್ಯವರ್ತಿಗಳ ಹಿಡಿತದಲ್ಲಿದ್ದು, ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಸಂಪರ್ಕಿಸಿಯೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಂಬಂಧವಿಲ್ಲದವರಿಗೆ ಪ್ರಾಶಸ: ಕೋಲಾರ ಆರ್ಟಿಒ ಕಚೇರಿಯಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅಧಿಕಾರಿ ವರ್ಗ ಪ್ರಾಶಸ ನೀಡುತ್ತಿದೆ. ಕಚೇರಿಯಲ್ಲಿ ಮಂಜುನಾಥ್ ಎಂಬವರು ಅಧಿಕಾರಿಯೂ ಅಲ್ಲ. ಸಿಬ್ಬಂದಿಯೂ ಅಲ್ಲ. ಗುತ್ತಿಗೆ ಸಿಬ್ಬಂದಿಯೂ ಅಲ್ಲ. ಆದರೂ ಈ ವ್ಯಕ್ತಿ ಆರ್ಟಿಒ, ಇನ್ಸ್ಪೆಕ್ಟರ್ ಸುತ್ತಮುತ್ತ ಓಡಾಡಿಕೊಂಡೇ ಇರುತ್ತಾನೆ. ಆರ್ಟಿಒ ಅಧಿಕಾರಿ ಹೇಳಿದರೂ ಆಗದ ಕೆಲಸಗಳು ಮಂಜುನಾಥ್ ಹೇಳಿದರೆ ಸುಲಭವಾಗುತ್ತವೆ. ಇಲಾಖೆಗೆ ಸಂಬಂಧವಿಲ್ಲದ ಖಾಸಗಿ ವ್ಯಕ್ತಿಗೆ ಅಧಿಕಾರಿಗಳು ಪ್ರಾಶಸ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.