ದೊಡ್ಡಬೆಲೆ ಗ್ರಾಮ ಪಂಚಾಯಿತಿ ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು

11 09 2025_BGR RURAL_PAGE_05
ದೊಡ್ಡಬೆಲೆ ಗ್ರಾಪಂ ಕೆಡಿಪಿ ತ್ರೆಮಾಸಿಕ ಸಭೆಗೆ ಅಧ್ಯಕ್ಷ ಮಂಜುನಾಥ್​,ಉಪಾಧ್ಯೆ ಮಂಗಳಾನಟರಾಜ್​, ಪಿಡಿಒ ವೆಂಕಟೇಶ್​ ಇನಾಮ್​ದಾರ್​ ಚಾಲನೆ ನೀಡಿದರು. ಸದಸ್ಯರಾದ ತಡಶೀಟ್ಟ ಮಂಜುನಾಥ್​, ಕೃಷ್ಣಪ್ಪ, ಶೇಖರ್​, ಪದ್ಮಾ ಸ್ವಾಮಿ, ಸೌಭಾಗ್ಯ ಬೋಜಣ್ಣ, ಶೈಲಜಾ, ಕಾರ್ಯದರ್ಶಿ ಪಾರ್ಥಗೌಡ, ಸಿಬ್ಬಂದಿ ಮಂಜುನಾಥ್​, ಅನಿಲ್​, ವೈದ್ಯಾಧಿಕಾರಿ ಗುಣಶೀಲ, ಆರ್​ಐ ಮಹೇಶ್​ ಕುಮಾರ್​, ಗ್ರಾಮಾಧಿಕಾರಿ ಆಕಾಶ್​, ಸಂಪತ್​ಕುಮಾರ್​ ಇದ್ದರು.
Published on

ತ್ಯಾಮಗೊಂಡ್ಲು: ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕಾದ ಅಧಿಕಾರಿಗಳು ಬರಿಗೈಯಲ್ಲಿ ಸಭೆಗೆ ಹಾಜರಾಗಿದ್ದಾರೆ, ಜತೆಗೆ ಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಗೈರಾಗಿದ್ದಾರೆ. ಈ ರೀತಿಯಾದರೆ ಗ್ರಾಮಾಭಿವೃದ್ಧಿ ಕನಸು ಕನಾಸಾಗಿಯೇ ಉಳಿಯುತ್ತದೆ ಎಂದು ದೊಡ್ಡಬೆಲೆ ಗ್ರಾಪಂ ಅಧ್ಯಕ್ಷ ಮಂಜುನಾಥ್​ ಬೇಸರ ವ್ಯಕ್ತಪಡಿಸಿದರು.

ನೆಲಮಂಗಲ ತಾಲೂಕು ದೊಡ್ಡಬೆಲೆ ಗ್ರಾಪಂನಿಂದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕೆಡಿಪಿ ತ್ರೆಮಾಸಿಕ ಸಭೆಯಲ್ಲಿ ಮಾತನಾಡಿದರು. ಸಭೆಗೆ 30 ಇಲಾಖೆಗಳ ಅಧಿಕಾರಿಗಳು ಬರಬೇಕಾಗಿತ್ತು, ಆದರೆ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಪಶುಸಂಗೋಪನೆ ಅಧಿಕಾರಿಗಳು ಮಾತ್ರ ಹಾಜರಾಗಿದ್ದಾರೆ, ಗ್ರಾಮಸ್ಥರ ನೋವಿಗೆ ಧ್ವನಿಯಾಗಬೇಕಿದ್ದ ಪ್ರಮುಖ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದರೂ ಗೈರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಅವರ ಮೇಲೆ ಈಗಲೇ ಮೇಲಧಿಕಾರಿಗಳಿಗೆ ದೂರು ನೀಡುವಂತೆ ಪಿಡಿಒ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪಿಡಿಒ ವೆಂಕಟೇಶ್​ ಇನಾಮ್​ದಾರ್​ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಅದರ ಪೂರ್ಣ ಮಾಹಿತಿಯನ್ನು ಕೆಡಿಪಿ ಸಭೆಯಲ್ಲಿ ಹಂಚಿಕೊಳ್ಳಬೇಕಾಗಿರುವುದು ಇಲಾಖೆಗಳ ಕರ್ತವ್ಯ ಎಂದರು. ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯೋಜನೆಗಳ ಮಾಹಿತಿಯನ್ನು ಗ್ರಾಪಂ ನೀಡುತ್ತದೆ. ಅಧಿಕಾರಿಗಳೇ ಗೈರಾದರೆ ಮಾಹಿತಿ ಸಿಗುವುದು ಹೇಗೆ ? ಕೆಡಿಪಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದಾರೆ ಇಂದಿನ ಸಭೆಯ ಮಾಹಿತಿ ಜತೆಗೆ ಅಧಿಕಾರಿಗಳ ಗೈರುಹಾಜರಿ ಬಗ್ಗೆ ತಿಳಿಸಿ ವರದಿ ನೀಡುತ್ತೇನೆ ಎಂದು ಹೇಳಿದರು.

ಕೃಷಿ ಹೊಂಡಕ್ಕೆ ಅರ್ಜಿ ಸಲ್ಲಿಸಿ: ಪ್ರಧಾನ ಮಂತ್ರಿ ಆಹಾರ ಸಂಸ್ಕರಣಾ ಟಕ ಪ್ರಾರಂಭಕ್ಕೆ 15 ಲಕ್ಷ ರೂ.ಸಹಾಯ ಧನ ನೀಡಲಾಗುತ್ತಿದೆ, 46 ರೈತರಿಗೆ ಟಾರ್ಪಲ್​ ನೀಡಲಾಗಿದೆ. ಕೃಷಿ ಹೊಂಡ ನಿರ್ಮಿಸಲು ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಇಲಾಖೆ ಅಧಿಕಾರಿ ಅಂಜನಾ ತಿಳಿಸಿದರು.

ಸ್ಥಳ ನೀಡಿದರೆ ಟ್ಯಾಂಕ್​ ನಿರ್ಮಾಣ : ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ಲಕ್ಷ$್ಮಣ್​ ಮಾತನಾಡಿ, ದೊಡ್ಡಬೆಲೆ, ಬಸಪ್ಪನ ಪಾಳ್ಯ, ಮಾವಿನಕೊಮ್ಮನಹಳ್ಳಿ ಗ್ರಾಮಗಳಲ್ಲಿ ಓವರ್​ ಹೆಡ್​ ಟ್ಯಾಂಕ್​ ನಿರ್ಮಿಸಲು ಗ್ರಾಪಂನಿಂದ ಸ್ಥಳ ನೀಡಿದರೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು. ಗೂಳಾಪುರ ಪುಟ್ಟರಾಜು ಜೆಜೆಎಂ ಗುತ್ತಿಗೆದಾರ ದೊಡ್ಡಬೆಲೆ ರೈಲ್ವೆ ಸ್ಟೇಷನ್​ ರಸ್ತೆ ಅಗೆದು ಹಾಗೆ ಬಿಟ್ಟು ಹೋಗಿದ್ದಾನೆ ಕೂಡಲೇ ಆತನನ್ನು ಬ್ಲಾಕ್​ಲಿಸ್ಟ್​ಗೆ ಸೇರಿಸಬೇಕು ಎಂದರು. ಕಾಮಗಾರಿ ಸರಿಯಾಗಿ ನಿರ್ವಹಿಸದಿದ್ದಕ್ಕೆ ಈಗಾಗಲೇ ನೋಟೀಸ್​ ನೀಡಿದ್ದೇವೆ, ಬ್ಲಾಕ್​ಲಿಸ್ಟ್​ಗೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಅಧಿಕಾರಿ ಪ್ರತಿಕ್ರಿಯಿಸಿದರು.

ಗೊಬ್ಬರ ಅಕ್ರಮ ಮಾರಾಟ : ಗ್ರಾಪಂ ಸದಸ್ಯರಾದ ಕೃಷ್ಣಪ್ಪ ಮತ್ತು ಮಂಜುನಾಥ್​ ಯೂರಿಯಾ ಗೊಬ್ಬರದ ಅಂಗಡಿಗಳ ಮೇಲೆ ಇಲಾಖೆಗೆ ಹತೋಟಿ ಇಲ್ಲ, ಬೇನಾಮಿಯಾಗಿ ಮದ್ಯದಂಗಡಿಗಳಲ್ಲಿ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಅವಶ್ಯಕತೆ ಇಲ್ಲದಿದ್ದರೂ ಇತರೆ ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಕೊಡುತ್ತಿದ್ದಾರೆ. ಅದಕ್ಕೆವ ಅಧಿಕಾರಿ ಅಂಜನಾ ಯಾರೂ ದೂರು ನೀಡಿಲ್ಲ ಹಾಗೇನಾದರು ಇದ್ದರೆ ಪರಿಶೀಲಿಸಿ ಕಠಿಣಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net