ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

4blrp1
Published on

ಬೇಲೂರು: ಇಲ್ಲಿನ ಚನ್ನಕೇಶವ ದೇಗುಲ ಮುಂಭಾಗ ಜ.10 ಮತ್ತು 11ರಂದು ನಡೆಯಲಿರುವ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಸಾಹಿತಿ ಹಾಗೂ ರಂಗಕರ್ಮಿ ಬೇಲೂರು ರಘುನಂದನ್ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಕಸಾಪ ಅಧ್ಯಕ್ಷ ಬಿ.ಎಂ.ರವೀಶ್ ನೇತೃತ್ವದಲ್ಲಿ ಇತ್ತೀಚೆಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ಆಹ್ವಾನ ಸ್ವೀಕರಿಸಿ ಮಾತನಾಡಿದ ರಘುನಂದನ್, ಕನ್ನಡದ ಕಂಪನ್ನು ಜಗತ್ತಿನೆಲ್ಲಡೆ ಹರಡುವ ಕೆಲಸ ಮಡಬೇಕಿದೆ. ಇದು ಸಾಧ್ಯವಾಗಬೇಕಾದರೆ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಬೇಕು. ಆ ಮೂಲಕ ಕನ್ನಡಪರ ಸಂಘಟನೆಗಳು ವೈಚಾರಿಕ ಮನೋಭಾವ ಮತ್ತು ಸಾಂಸ್ಕೃತಿಕ ವೈಭವವನ್ನು ಬೆಳೆಸಲು ಸಜಕರಿಸಬೇಕು ಎಂದರು.

ಕನ್ನಡ ನಾಡು ಮತ್ತು ನುಡಿಗಾಗಿ ಶ್ರಮಿಸಿದ ಸಾಹಿತಿಗಳು, ಹೊರಾಟಗಾರರನ್ನು ಗೌರವಿಸಿದರೆ ಕನ್ನಡತನವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.
ಕಸಾಪ ಪದಾಧಿಕಾರಿಗಳಾದ ನಾಗೇಶ್, ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net