ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಮಂತ್ರಣ

12 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್​ ವತಿಯಿಂದ ನಗರದಲ್ಲಿ ಜೂ. 16ರಂದು ಆಯೋಜಿಸಿರುವ ಧಾರವಾಡ ತಾಲೂಕು 8ನೇ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಬುಧವಾರ ಅಧಿಕೃತ ಆಮಂತ್ರಣ ನೀಡಿ ಗೌರವಿಸಲಾಯಿತು.
ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಕವಿ ಕೆ.ಎಚ್​. ನಾಯಕ ಅವರ ನಿವಾಸಕ್ಕೆ ತೆರಳಿದ ಪರಿಷತ್​ ಪದಾಧಿಕಾರಿಗಳು, ಅಧಿಕೃತ ಆಮಂತ್ರಣ ನೀಡಿ ನಾಯಕ ದಂಪತಿಗೆ ಸನ್ಮಾನಿಸಿದರು. ಕಚುಸಾಪ ಕೇಂದ್ರ ಸಮಿತಿ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷ ಶಂಕರ ಕುಂಬಿ, ಪ್ರಸಾರ0ಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು, ತಾಲೂಕು ಅಧ್ಯಕ್ಷೆ ಜಯಶ್ರೀ ಪಾಟೀಲ, ಡಾ. ವಿಲಾಸರಾವ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net