ಭಾರತಿ ಪಾಟೀಲರಿಗೆ ಅಧಿಕೃತ ಆಹ್ವಾನ

Official invitation to Bharti Patil
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಭಾರತಿ ಪಾಟೀಲ ಅವರಿಗೆ ಸನ್ಮಾನಿಸಿ ಆಹ್ವಾನ ನೀಡಲಾಯಿತು. ಹಾಸಿಂಪೀರ ವಾಲೀಕಾರ, ಡಾ. ಸಂಗಮೇಶ ಮೇತ್ರಿ, ಡಾ. ಆನಂದ ಕುಲಕರ್ಣಿ, ಅನ್ನಪೂರ್ಣ ಬೆಳ್ಳೆನವರ ಮತ್ತಿತರರಿದ್ದಾರೆ.
Published on

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಳ್ಳಲಾಗಿರುವ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಭಾರತಿ ಪಾಟೀಲ ಅವರಿಗೆ ಗುರುವಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

ನಗರದ ಖಾಸಗಿ ಹೊಟೇಲ್‌ನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮತ್ತವರ ಪದಾಧಿಕಾರಿಗಳು ಸರ್ವಾಧ್ಯಕ್ಷರಿಗೆ ಸನ್ಮಾನಿಸಿ ಆಮಂತ್ರಣ ಪತ್ರಿಕೆ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಭಾರತಿ ಪಾಟೀಲ, ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ನನ್ನ ಸೌಭಾಗ್ಯ ಎಂದರು.
ಡಾ. ಸಂಗಮೇಶ ಮೇತ್ರಿ, ಡಾ. ಆನಂದ ಕುಲಕರ್ಣಿ, ಅನ್ನಪೂರ್ಣ ಬೆಳ್ಳೆನವರ, ಅಭಿಷೇಕ ಚಕ್ರವರ್ತಿ, ಸುಭಾಷ ಕನ್ನೂರ, ರವಿ ಕಿತ್ತೂರ, ವಿದ್ಯಾವತಿ ಅಂಕಲಗಿ, ಕೆ.ಎಫ್. ಅಂಕಲಗಿ, ಮಹಮ್ಮದ ಗೌಸ ಹವಾಲ್ದಾರ್, ಕಮಲಾ ಮುರಾಳ, ವಿಜಯಲಕ್ಷ್ಮಿ ಹಳಕಟ್ಟಿ, ಶಿಲ್ಪಾ ಹಂಜಿ, ಶಿಲ್ಪಾ ಬಸ್ಮೆ, ನಾಗರಾಜ ಬಿರಾದಾರ, ಅಣ್ಣುಗೌಡ ಬಿರಾದಾರ, ಅಹಮ್ಮದ ವಾಲಿಕಾರ, ಕೆ.ಎಸ್. ಪಾಟೀಲ, ದಾದಾಗೌಡ ಪಾಟೀಲ, ರಾಜು ಅಂಗಡಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net