

ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್ ಅವರು ತೂಬಗೆರೆ ಗ್ರಾಮ ಪಂಚಾಯಿತಿಯ ಕಾವನಹಳ್ಳಿ ಗ್ರಾಮದ ಶ್ರೀಕಾಂತ ಫಾರಂಗೆ ಭೇಟಿ ನೀಡಿ ವೇನ್ಸಾಯಿ ಪ್ರೋರಿಟೆಕ್ ಪಾಲಿಮನೆಯಲ್ಲಿ ಪುಷ್ಪ ಬೆಳೆಗಳು ವೀಕ್ಷಣೆ ಮಾಡಿದರು. ಇದಾದ ಬಳಿಕ ದೊಡ್ಡಬಳ್ಳಾಪುರ ತಾಲೂಕಿನ ಎಪಿಎಂಸಿ ದಾಸ್ತಾನು ಮಳಿಗೆ ಭೇಟಿ ನೀಡಿ ಅಕ್ಕಿ ಮತ್ತು ರಾಗಿ ಸಂಗ್ರಹಣೆಯ ವ್ಯವಸ್ಥೆ ಪರಿಶೀಲಿಸಿದರು. ಉತ್ತಮ ನಿರ್ವಹಣೆ ಮಾಡಬೇಕು ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್.ಅನುರಾಧಾ ಅವರು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ಹೆಚ್ಚು ಅಭಿವೃದ್ಧಿ ಪಡಿಸಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿದರು. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಇತ್ತೀಚಿಗೆ ತೋಟಗಾರಿಕೆ ಬೆಳೆಗಳು ಮುಂಚೂಣಿಗೆ ಬರುತ್ತಿವೆ, ರೈತರು ಸಹ ತೋಟಗಾರಿಕೆ ಬೆಳೆ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯ ಯೋಜನೆಗಳು ಹಾಗೂ ಅವುಗಳ ಬಗ್ಗೆ ರೈತರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸಿಇಒ ಮಾಹಿತಿ ನೀಡಿದರು.