ಸುಳ್ಳು ಖಾತೆ ಸೃಷ್ಟಿಸಿದ ಅಧಿಕಾರಿಗಳ ಅಮಾನತು

BBMP
Published on

ಬೆಂಗಳೂರು: ಗುತ್ತಿಗೆ ಬಿಲ್ ಹಣವನ್ನು ಸುಳ್ಳು ಖಾತೆ ಸೃಷ್ಟಿಸಿ ವರ್ಗಾಯಿಸಿಕೊಂಡು ಅಕ್ರಮವೆಸಗಿರುವ ಇಬ್ಬರು ಲೆಕ್ಕ ಅಧೀಕ್ಷಕರು ಮತ್ತು ದ್ವಿತೀಯ ದರ್ಜೆ ಸಹಾಯಕನನ್ನು ಪಾಲಿಕೆ ಆಯುಕ್ತರು ಅಮಾನತು ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಬಿಎಂಟಿಎಫ್ ಮತ್ತು ಹಲಸೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಹದೇವಪುರ ವಿಭಾಗದಲ್ಲಿ ಆನ್​ಲೈನ್ ಕಾಮಗಾರಿ ಬಿಲ್ ಪಾವತಿ ವೇಳೆ ಹಣ ವರ್ಗಾಯಿಸುವಾಗ ಗುತ್ತಿಗೆದಾರರ ಬ್ಯಾಂಕ್ ಖಾತೆ ವಿವರ ತಿದ್ದುಪಡಿ ಮಾಡಿ ಹಣ ವರ್ಗಾಯಿಸಿಕೊಂಡಿದ್ದರು. ಒಟ್ಟು 4.42 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ಡ್ರಾ ಮಾಡಿಕೊಂಡಿದ್ದಾರೆ. ಜಾಬ್ ಕೋಡ್ ಹಂಚಿಕೆ ಮಾಡಿ ಅಕ್ರಮಕ್ಕೆ ಸಹಕಾರ ನೀಡಿದ್ದ ಲೆಕ್ಕ ಅಧೀಕ್ಷಕ ರಾಮಮೂರ್ತಿ, ಅಕ್ರಮದಲ್ಲಿ ಶಾಮೀಲಾಗಿರುವ ಲೆಕ್ಕ ಅಧೀಕ್ಷಕಿ ಅನಿತಾ ಮತ್ತು ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ಅಮಾನತುಗೊಂಡವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net